(ಬೊಗಳೂರು ನಿ-ಗ್ರಹ ಬ್ಯುರೋದಿಂದ)
ಬೊಗಳೂರು, ಸೆ.2- ಆಗಸದ ಸೌರಮಂಡಲದಿಂದ ಧೂಮಕೇತುವಿನ ರೀತಿಯಲ್ಲಿ ಪ್ಲುಟೋ ಗ್ರಹ ಉದುರಿ ಬೀಳಲು ಕಾರಣಗಳು ನಿಧಾನವಾಗಿ ಸ್ಪಷ್ಟವಾಗತೊಡಗಿವೆ.
ಇದರಲ್ಲಿ ನಿಜಕ್ಕೂ ಮಾನವರ ಕೈವಾಡವಿದೆ ಎಂಬುದು ಕೂಡ ಸಾಬೀತಾಗಿದೆ.
ವಾಸ್ತವವಾಗಿ ಮಾನವ ಲೋಕದ ಹುಲುಮಾನವರು ತಮ್ಮನ್ನು ಯಾವತ್ತೂ ಕಾಡುತ್ತಿರುವ ಶನಿ ಗ್ರಹವನ್ನೇ ಆಗಸದಿಂದ ಉರುಳಿಸಲು ನೋಡಿದ್ದರು. ಆದರೆ ಅವರು ಬಿಟ್ಟ ಕ್ಷಿಪಣಿ ಗುರಿ ತಪ್ಪಿ ಪ್ಲುಟೋಕ್ಕೆ ತಗುಲಿತ್ತು ಎಂಬುದು ಅಸಂಶೋಧನೆಯಿಂದ ತಿಳಿದುಬಂದ ಅಂಶ.
ಇನ್ನೂ ಒಂದು ಸಿದ್ಧಾಂತದ ಪ್ರಕಾರ, ಇಲ್ಲಿಯೂ ಶನಿ ತನ್ನ ಪ್ರಭಾವವನ್ನು ಮೆರೆದಿದ್ದಾನೆ. ಪ್ಲುಟೋವನ್ನು ಕಾಡಿದ ಶನಿ, ಮಾನವರ ಅಣ್ವಸ್ತ್ರ ಭರಿತ ಕ್ಷಿಪಣಿಯು ಇರಾನಿನಿಂದ ಆಗಸಕ್ಕೆ ನೆಗೆದಿರುವಂತೆಯೇ ತನ್ನ ಸಹೋದ್ಯೋಗಿಯಾಗಿದ್ದ ಪ್ಲುಟೋವನ್ನು ಮುಂದಕ್ಕೆ ತಳ್ಳಿದ್ದಾನೆ.
ಶನಿಯ ಮುಂದಿನ ಸರದಿ ತನ್ನನ್ನು ಗುರಿಯಾಗಿರಿಸಿಕೊಂಡ ಹುಲುಮನುಜರನ್ನು ಕಾಡುವುದು ಎಂದು ಗೊತ್ತಾಗಿರುವುದರಿಂದ ಬೊಗಳೆ ರಗಳೆ ಬ್ಯುರೋ ನಾಳೆ ಒಂದು ದಿನ ರಜಾ ಹಾಕಿ ಮುಸುಕಿ ಹಾಕಿ ಮಲಗಲು ನಿರ್ಧರಿಸಿದೆ.
18 ಕಾಮೆಂಟ್‌ಗಳು
ಸದ್ಯ ನನ್ನ ಶನಿಕಾಟ ಮುಗಿಯುತ್ತಾ ಬಂದಿದೆ. ಇಲ್ಲದೇ ಇದ್ದಿದ್ರೆ ನನ್ನನ್ನೂ ಮನೆಯಿಂದಾಚೆಗೆ ಒದ್ದೋಡಿಸುತ್ತಿದ್ದ. ನಾಳಯಿಂದೆ ಬೊ-ರಗೆ ಶನಿಕಾಟವೇ? ಅಂದ್ರೆ ಏಳೂವರೆ ವರ್ಷ ಬಾಗಿಲು ತೆಗೆಯೋಲ್ವೇ? ಹಾಗಿದ್ರೆ ನಾವಿನ್ಯಾವ ಪತ್ರಿಕೆಯನ್ನು ಓದ್ಬೇಕು. ಈಗೇನು ಏಪ್ರಿಲ್ ತಿಂಗಳು ಹತ್ತಿರ ಬಂತೇ?
ಪ್ರತ್ಯುತ್ತರಅಳಿಸಿಅಯ್ಯಯ್ಯಪ್ಪ್ಪ.... ನಾಳೆ ಮಾತ್ರ ಹೊದ್ದು ಮಲಗೋದು ಈ ಬ್ಯುರೋ...
ಪ್ರತ್ಯುತ್ತರಅಳಿಸಿಅದು ನಿಮ್ಮ ಹತ್ತು ಸಾವಿರ hits ಅನ್ನು celebrate ಮಾಡ್ಲಿಕ್ಕೆ ನಾನು ಮತ್ತೆ ಅಹ್ಮದಿಯಣ್ಣ send ಮಾಡಿದ special N-ಪಟಾಕಿ ಮಾರಾಯ್ರೆ, ಅದಕ್ಕೆಲ್ಲಾ ನೀವು ಹೀಗೆ ಪೋಡಿಗೆ ಮಾಡ್ಕೊಂಡು ಇಂಚ ಮುಚ್ಚಿಪಾಡೊಂತು ಮಲ್ಕೊಳ್ಳುವುದಾ? ಛೆ ಛೆ...
ಪ್ರತ್ಯುತ್ತರಅಳಿಸಿನಿಜವಾದ missile ಬಂದ್ರೂ ನೀವೇನೂ ಮಂಡೆಬೆಚ್ಚ ಮಾಡ್ಬೇಡಿ. ಈ ಕಡೇ ಏನಾದ್ರೂ something ತಳ್ಳಿ, ಇಲ್ಲಿ ನಾನೆಲ್ಲ ನೋಡ್ಕೊಳ್ತೇನೆ.
ಗ್ರಹ ಎಂಬ ಪದವನ್ನು ನಾವು ಇಂಗ್ಲೀಶಿನ planet ಪದಕ್ಕೆ ಪಾರಿಭಾಷಿಕವಾಗಿ ಬಳಸುತ್ತಿದ್ದೇವೆ (ಖಗೋಳಶಾಸ್ತ್ರದಲ್ಲಿ). ಈ planet ಪದದ ಮೂಲ ಗ್ರೀಕ್ ಪದ. ಅದರ ಮೂಲ ಅರ್ಥ ಅಲೆಮಾರಿ ಎಂದು. ಈ ವಿವರಣೆಯನ್ನು ಅನ್ವಯಿಸ ಹೊರಟರೆ ನಿಜವಾದ ಪ್ಲಾನೆಟ್ ಪ್ಲೂಟೋವೇ. ಉಳಿದವೂ ಅಲೆಮಾರಿಗಳೇ ಆದರೆ ಪ್ಲೂಟೋನಷ್ಟು ಅಲೆಮಾರಿ ಉಳಿದವಲ್ಲ. ಪ್ಲೂಟೋದ ಕಕ್ಷೆ ಬೇರೆ ಗ್ರಹಗಳ ಕಕ್ಷೆಗಳಿಗೆ, ಅದರಲ್ಲೂ ಮುಖ್ಯವಾಗಿ ನೆಪ್ಚ್ಯೂನ್‌ನ ಕಕ್ಷೆಗೆ, 17 ಡಿಗ್ರಿಗಳಷ್ಟು ಓರೆಯಾಗಿದೆ. ಅಷ್ಟು ಮಾತ್ರವಲ್ಲ, ಅದು ನೆಪ್ಚ್ಯೂನ್‌ನ ಕಕ್ಷೆಯ ಒಳಗೆ ಕೂಡ ನುಗ್ಗುತ್ತದೆ. ಹಾಗಾಗಿ ಪ್ಲೂಟೋವನ್ನು ಮಾತ್ರ ಪ್ಲಾನೆಟ್ ಅನ್ನೋಣವೇ? ಏನಂತೀರಾ?
ಪ್ರತ್ಯುತ್ತರಅಳಿಸಿ-ಪವನಜ
ಶ್ರೀಲತ,
ಪ್ರತ್ಯುತ್ತರಅಳಿಸಿಮಂಡೆಬೆಚ್ಚ ಆದರೆ ಅರಬ್ಬಿ ಸಮುದ್ರದ ನೀರು ಇದೆ. ಆದರೆ .... ಬೆಚ್ಚ ಆದರೆ? ಅದರ ಬಗ್ಗೆ ಮಂಡೆಬೆಚ್ಚ ಮಾಡಬೇಡಿ. ಈ ಲೇಖನ ಓದಿ - http://vishvakannada.com/node/289
-ಪವನಜ
ಶ್ರೀಲತಾ ಪುಟ್ಟಿ ಅವರೆ,
ಪ್ರತ್ಯುತ್ತರಅಳಿಸಿಬೆಳ್ಳಾಂಬೆಳಗ್ಗೆನೇ ಅಂದ್ಕೊಂಡೆ... ಇದು ನಿಮ್ಮದೇ ಕಿತಾಪತಿ ಅಂತ...
ನಂಗೊತ್ತು... 10K ಹಿಟ್ಸ್ ಸೆಲೆಬ್ರೇಶನ್‌ಗೆ ನೀವು ಶನಿಯತ್ತ ಡೈರೆಕ್ಟ್ ಹಿಟ್ ಮಾಡೋಕೆ ಹೋದ್ರಿ ಅಂತ...
ನಿಮ್ಮ ಇರಾನಿನಿಂದ ಸುದ್ದಿ ಇಲ್ಲದೆ ನಾವೇ ಅಲ್ಲಿಗೆ ಓಡಿ ಬರಬೇಕಾಯಿತು... ಭುಸ್sssssssssಗೆ ಹೇಳಿಬಿಡ್ತೀನಿ... sanction ಹಾಕಿಸಲಾಗುತ್ತದೆ.
ಪವನಜರೆ,
ಪ್ರತ್ಯುತ್ತರಅಳಿಸಿನಮ್ಮ some-ಶೋಷಣೆಗೆ ನಿಮ್ಮ sum-ಶೋಧನಾತ್ಮಕ ಮಾಹಿತಿ ಪೂರಕವಾಗಿದೆ.
ಇದರಿಂದ ಮತ್ತೊಂದು ಗೊತ್ತಾಗಿಬಿಟ್ಟ ಅಂಶ ಅಂದ್ರೆ ಪ್ಲುಟೋ ಯಾಕೆ ನೆಪ್ಚೂನ್ ಮನೆಯೊಳಗೆ ನುಗ್ಗುತ್ತದೆ ಎಂಬ ಬಗ್ಗೆ ಹೇಗಾದರೂ ಮಾಡಿ ಸಂಶೋಧನೆ ಮಾಡಬೇಕಿದೆ...
ದಾರಿ ತಪ್ಪಿದ ಮಗನಿಗೆ ಪರ್ಮನೆಂಟ್ ದಾರಿ ತೋರಿಸಿಬಿಟ್ಟರೇ?
ಶ್ರೀಲತಾ ಅವರೆ
ಪ್ರತ್ಯುತ್ತರಅಳಿಸಿಹೇಳೋದು ಮದತ್ ಬುಡ್ಯೆ...
something ತಳ್ಳಲು ಹೇಳಿರುವುದರಿಂದ
ಒಂಜಿ ಗೋಳಿಬಜೆ ಬಾಂಬ್, ಮತ್ತೊಂಜಿ ಬಾಳೆಕಾಯಿ ಪೋಡಿಗೆನ್ ಕಡಪುಡಿಸಲಾಗುತ್ತದೆ.
ಎಲ್ಲವನ್ನೂ ನೋಡಿಕೊಳ್ಳುತ್ತಾ ಇರಬೇಡಿ, ನೀವು ನೋಡುತ್ತಿದ್ದಂತೆಯೇ ಯಾರಾದರೂ ಗುಳುಂಕರಿಸಿಬಿಟ್ಟಾರು
I never knew there are so many kannada bloggers ...:)
ಪ್ರತ್ಯುತ್ತರಅಳಿಸಿTumba chennagide illi...
how do I comment in kannada ?
@ಪವನಜ: "ಬೆಂಚ್ ಬಿಸಿ ಮಾಡ್ಲಿಕ್ಕೆ ಶಾಲೆಗೆ ಬರುವುದಾ" ಅಂತ ನಮ್ಮ primary school ಮಾಷ್ಟ್ರು ಒಬ್ರು ಬೈತಿದ್ರು, ಇನ್ಮೇಲೆ ಹಾಗೆ ಹೇಳುವಹಾಗಿಲ್ಲ :-)
ಪ್ರತ್ಯುತ್ತರಅಳಿಸಿ@ಅನ್ವೇಷಿ: ಗೋಳಿಬಜೆ,ಪೋಡಿ ಅಂತ ಆಸೆ ತೋರಿಸ್ತಾ ಇದ್ದೀರಿ. ಸ್ವಲ್ಪ ಜಾಸ್ತೀನೇ ಕಳ್ಸಿ, ಅಹ್ಮದಿನೂ ರುಚಿ ನೋಡ್ಲಿ.
@reborn: ಇದೊಂತರಾ ಹರಟೆಕಟ್ಟೆ, ಬೆಂಗ್ಳೂರು ಕನ್ನಡದಲ್ಲಿ 'ಓತ್ಲಾ ಹೊಡೆಯೋದು' ಅಂತಾರಲ್ಲ, ಅದನ್ನೇ ನಾವಿಲ್ಲಿ ಮಾಡೋದು.
ಪುನರ್ಜನ್ಮ ಪಡೆದವರೆ (reborn),
ಪ್ರತ್ಯುತ್ತರಅಳಿಸಿನಮ್ಮ ಬೊಗಳೆ ಕಟ್ಟೆಗೆ ಸ್ವಾಗತ.
ನೀವು ಮಣ್ಣಿನ ಪಳ್ಳದಲ್ಲಿರೋದು ಅಂತ ಹೇಗೋ ಗೊತ್ತಾಗಿ ಸುಪ್-ಫ್ಲೈಗೆ ಬಂದಿದ್ದೆ.
ಧನ್ಯವಾದ.
ಶ್ರೀಲತಾ....
ಪ್ರತ್ಯುತ್ತರಅಳಿಸಿಪೋಡಿ ತೋರಿಸಿ ನೀವು ಅಹ್ಮದಿಯಣ್ಣನಿಗೇ ಪೋಡಿಗೆ ಹುಟ್ಟಿಸಿಬಿಡಿ. ಆದ್ರೆ ಪಾರ್ಸೆಲ್ ಚೆಕಿಂಗ್ ಮಾಡೋವಾಗ್ಲೇ ಅಲ್ಲಿ ಬಾಂಬ್ ನಿಷ್ಕ್ರಿಯ ದಳದವರು ಅವನ್ನೆಲ್ಲಾ ನುಂಗಿ ನೀರು ಕುಡಿದರೆ?
ಅದೆಲ್ಲ ಇರ್ಲಿ, ಅದೇನೋ sanction ಅಂತಿದ್ರಲ್ಲ, ಸ್ವಲ್ಪ ಇಲ್ಲಿ ನೋಡಿ. ಯಾವತ್ತಿದ್ರೂ ಎಲ್ಲರ ಜುಟ್ಟೂ middle-east ಕೈಯಲ್ಲೇ.
ಪ್ರತ್ಯುತ್ತರಅಳಿಸಿಯಾಪ್ಪ್ಪಾssssss!!!!
ಪ್ರತ್ಯುತ್ತರಅಳಿಸಿನೀವು ನಮಗೆ ಎಣ್ಣೆ ಕುಡಿಸಿಬಿಡ್ತೀರಿ....!!!
OK OK ನಾವೊಂದು ಒಪ್ಪಂದಕ್ಕೆ ಬರೋಣ....
ನಿಮಗೆ ನಾವು ಗೋಳಿಬಜೆ ಬಾಂಬ್ ಕೊಡುತ್ತೇವೆ.... ನೀವು ನಮಗೆ ಎಣ್ಣೆ ಕೊಡಿ... ಆದ್ರೆ ಬೆಲೆ ಮಾತ್ರ ಹೆಚ್ಚಿಸಬೇಡಿ.
ಬೇಕಿದ್ದರೆ ಇರಾನ್-ಭಾರತ ಪೈಪ್ ಲೈನ್ ಮೂಲಕ ಮೆಲ್ಲಗೆ ಸುರಿದುಬಿಡಿ....
ಪ್ಲುಟೋ ಇಂದ pipelineವರೆಗೆ? ಏನ್ರಿ ಇದೆಲ್ಲ?
ಪ್ರತ್ಯುತ್ತರಅಳಿಸಿಮನಸ್ವಿನಿ (ಹೆಸ್ರು ಚೆಂದ ಉಂಟು)..
ಪ್ರತ್ಯುತ್ತರಅಳಿಸಿ'anything under the sun' ನಮ್ಮ ಥೀಮ್. ನೀವೂ ದಿನಾ ಬನ್ನಿ, ಹರಟೆ ಹೊಡಿಲಿಕ್ಕೆ.
ಮನಸ್ವಿನಿ,
ಪ್ರತ್ಯುತ್ತರಅಳಿಸಿನಮ್ ಇರಾನ್ ಪ್ರತಿನಿಧಿ ಲತಾ ಅವರೇ ಪ್ಲುಟೋವನ್ನು ಹೊಡೆದುರುಳಿಸಿದ್ದಕ್ಕೆ ಅವರನ್ನು ತರಾಟೆಗೆ ತಗೊಳ್ತಾ ಇರೋದು.
ಶ್ರೀಲತಾ,
ಪ್ರತ್ಯುತ್ತರಅಳಿಸಿ(ತಲೆ)ಹರಟೆಕಟ್ಟೆಗೆ ಶೀಘ್ರವೇ ಅಡಿಪಾಯ ಹಾಕೋದಿಕ್ಕೆ ನಿಮ್ಮ ಅಹ್ಮದಿನೇಜಾದ್‌ಗೆ ಹೇಳಿ.... ಆದ್ರೆ ಅಣ್ವಸ್ತ್ರ ಮಾತ್ರ ತರೋದು ಬೇಡಾಂತ ಹೇಳಿಬಿಡಿ.
ಏನಾದ್ರೂ ಹೇಳ್ರಪಾ :-D