ಬೊಗಳೆ ರಗಳೆ

header ads

ಮಾನ(ವ) ರಕ್ಷಣೆಗೆ ಪ್ರಾಣಿಗಳಿಂದ ಬಟ್ಟೆ ತೊಟ್ಟು ಪ್ರತಿಭಟನೆ

(ಬೊಗಳೂರು ಅಮಾನವೀಯ ಬ್ಯುರೋದಿಂದ)
ಬೊಗಳೂರು, ಆ.29- ಮಾಂಸಾಹಾರ ತ್ಯಜಿಸಬೇಕು ಎಂದು ತಮ್ಮ ಪರವಾಗಿ ಮಾನವ ಪ್ರಾಣಿಗಳು ಭಾರತದಲ್ಲೂ ಬಟ್ಟೆಬಿಚ್ಚಿ ಹೋರಾಟ ನಡೆಸುತ್ತಿರುವುದರಿಂದ ಉತ್ತೇಜನಗೊಂಡಿರುವ ಮಾನವೇತರ ಪ್ರಾಣಿಗಳು, ಇದೀಗ ಮಾನ(ವರ) ರಕ್ಷಣೆಗೆ ಮೈತುಂಬಾ ಬಟ್ಟೆ ಧರಿಸಿ ಪ್ರತಿಭಟನೆಗೆ ಸಜ್ಜಾಗುತ್ತಿರುವ ಅಂಶವೊಂದು ಬೆಳಕಿಗೆ ಬಂದಿದೆ.

ಈ ಪ್ರತಿಭಟನೆಯ ನೇತೃತ್ವವನ್ನು ಅಖಿಲ ಭಾರತ ಗಾರ್ದಭ ಸಂಘವು ವಹಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚುತ್ತಿರುವುದರಿಂದ ಮಾನವರ ಉಡುಗೆ ತೊಡುಗೆಯ ಪ್ರಮಾಣದಲ್ಲಿ ದಯನೀಯ ಕುಸಿತ ಕಂಡುಬಂದಿದೆ. ಕೆಲವು ಮಾನವ ಪ್ರಾಣಿಗಳು ಉಡಲು ಬಟ್ಟೆ ಇಲ್ಲದೆ ತುಂಡು ತುಂಡಾದ, ಅಲ್ಲಲ್ಲಿ ಹರಿದ ಬಟ್ಟೆ ಧರಿಸುತ್ತಾ ಇದ್ದಾವೆ. ಆದರೆ ಅದಕ್ಕೆ ಹೊಸ ಫ್ಯಾಶನ್ ಎಂದು ಕರೆದುಕೊಂಡು ಅವರು ನೋವು ನುಂಗಿ ಸಂಭಾಳಿಸಿಕೊಂಡು ಹೋಗುತ್ತಾರೆ ಎನ್ನುವುದು ಅಭಾಗಾಸಂ ಅಧ್ಯಕ್ಷ ಗಾರ್ದಭ ರಜಕ್ ಅಭಿಮತ.

ಈ ಕಾರಣಕ್ಕೆ, ಅಗಸ ತಮ್ಮ ಮೇಲೆ ಹೇರುವ ಬಟ್ಟೆಯನ್ನೆಲ್ಲಾ ಅಡಗಿಸಿ ಎಲ್ಲಾ ಪ್ರಾಣಿಗಳಿಗೂ ಹಂಚಲಾಗುತ್ತದೆ. ಪ್ರಾಣಿವರ್ಗದವರೆಲ್ಲರೂ ತಮ್ಮ ಸಂಘ ಕೊಡಮಾಡುವ ಬಟ್ಟೆ ತೊಟ್ಟುಕೊಂಡು ಈ ಪ್ರತಿಭಟನೆಗೆ ಹಾಜರಾಗುವಂತೆ ಗಾರ್ದಭ್ ರಜಕ್ ಆಗ್ರಹಿಸಿದ್ದಾರೆ.

ಈ ಮಧ್ಯೆ, "ಅಯ್ಯೋ.... ಮಾನವರಿಗೆ ಇಂಥ ಸ್ಥಿತಿಯೇ? ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂತ ಹಾಡುವ ದುಸ್ಥಿತಿಗಿಳಿದರೇ? ಅಷ್ಟೊಂದು ಬಡತನ ಈ ಜನ್ಮದಲ್ಲಿ ಯಾವುದೇ ಪ್ರಾಣಿವರ್ಗಕ್ಕೆ ಬಾರದಿರಲಿ" ಎಂದು ಪ್ರಾಣಿಗಳು ಗಳಗಳನೆ ತಮ್ಮ ಶೋಕ ವ್ಯಕ್ತಪಡಿಸಿವೆ.

ಈ ಹಿಂದೆ ತಮ್ಮನ್ನು ಮಾನವಾತೀತವಾಗಿರುವ ಒಂದು ವರ್ಗವಾದ ಪೊಲೀಸ್ ಇಲಾಖೆಯು ಅಪ್ರಾಣಿ ಎಂದು ಪರಿಗಣಿಸಿದಾಗ ಬೊಗಳೆ ರಗಳೆ ಬ್ಯುರೋ ಮಾಡಿದ ಸಹಾಯದಿಂದ ಉತ್ತೇಜನಗೊಂಡು ಮತ್ತು ಈ ಬ್ಯುರೋದಲ್ಲೂ ಮಾನವರು ಇದ್ದಾರಲ್ಲಾ ಎಂದು ಆಶ್ಚರ್ಯಗೊಂಡು ಈ ಕ್ರಮಕ್ಕೆ ಮುಂದಾಗಿರುವುದಾಗಿ ಗಾರ್ಧಭ್ ರಜಕ್ ಘೋಷಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. Mavana rakshaNege paaNigaLiMda BaTTu-taTTe biTTu pratiBhatane...??
    enri idella elllaa confusooo

    ಪ್ರತ್ಯುತ್ತರಅಳಿಸಿ
  2. ಮುಸಾಫಿರ್ ಅವರೆ,
    ಪ್ರಾಣಿಗಳ ರಕ್ಷಣೆಗೆ ಮಾನವರು ಬಟ್ಟೆ ಬಿಟ್ಟು ಪ್ರತಿಭಟನೆ ಮಾಡೋವಾಗ ಮಾವನ ರಕ್ಷಣೆಗೆ ಪ್ರಾಣಿಗಳು ಬಟ್ಟೆ ತೊಟ್ಟು ಹೊರಬಂದರೆ ತಪ್ಪಲ್ಲ...

    ಪ್ರತ್ಯುತ್ತರಅಳಿಸಿ
  3. ಪ್ರಾಣಿಗಳು ಹೇಗೆ ಬಟ್ಟೆ ತೊಟ್ಟುಕೊಳ್ಳುತ್ತವೆ. ನಾನು ನೋಡಬೇಕೆಂಬ ಆಸೆ. ಅಯ್ಯೋ ಏನೇನೋ ಅರ್ಥೈಸಬೇಡಿ. ಉದಾಹರಣೆಗೆ ಹಸು ಹೇಗೆ ಮೈ ಮೇಲೆ ಅಂಗಿ ಹಾಕಿಕೊಳ್ಳುವುದು ಎನ್ನುವುದನ್ನು ನೋಡಬೇಕು, ಅಷ್ಟೇ.

    ಅದ್ಯಾರೋ ರಜಕ್ ಅಂದ್ರಲ್ಲ ಅವರ್ಯಾರು? ನಮ್ಮನೆ ಪಕ್ಕದಲ್ಲಿರೋರೂ ರಜಕ್ - ಆದರೆ ಅವರ ಹೆಸರು ಗಾರ್ದಭ ಅಲ್ಲ. ಅವರಿಗೂ ಇವರಿಗೂ ಏನಾದ್ರೂ ಸಂಬಂಧವಿದೆಯೇ ಎಂದು ತಿಳಿಯಬೇಕಿದೆ.

    ಈ ಪ್ರತಿಭಟನೆಯಲ್ಲಿ ಸಾಕಿ ಪಾಲ್ಗೊಳ್ಳಲಿಲ್ವಾ?

    ಪ್ರತ್ಯುತ್ತರಅಳಿಸಿ
  4. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಮಾವಿನರಸರೆ,
    ಸಾಕೀ ವಸ್ತ್ರ ಅಂತ ಹೇಳಿದ ರಾಖೀ ಸಾವಂತ್ ಕೂಡ ಇಲ್ಲೆಲ್ಲೋ ಕಂಡಿದ್ದಾರೆ... ಅದರೆ ಆಕೆ ಎಷ್ಟು ಬಟ್ಟೆಬಿಚ್ಚಿದ್ದರೆಂದರೆ ಎಲ್ಲವೂ ಮಾಯೆ ಅನ್ನುವಷ್ಟರ ಮಟ್ಟಿಗೆ... :)

    ನೀವೇನಾದ್ರೂ ಪ್ರಾಣಿಗಳು ಬಟ್ಟೆ ಹಾಕಿಕೊಳ್ಳುವ ಕೊಠಡಿಗೆ ಹೋಗಿಬಿಟ್ರೆ.....


    ವಾಪಸ್ ಬರೋದು ಕಷ್ಟವೇ ಸರಿ...:(

    ಪ್ರತ್ಯುತ್ತರಅಳಿಸಿ
  6. ಹೋರಾಟ ಮಾಡಿ ಹಿಂದಿರುಗುತ್ತಿದ್ದ ಗಾರ್ದಭಕ್ಕೆ ಸಂಘ ದಾರಿಯಲ್ಲಿ ಮಲ್ಲಿಕಾ ಶೇರಾವತ್ ಮನೆ ಮುಂದೆಗಡೆಯಿಂದ ಬರ್ತಾ ಇರೋಗ,ಅಲ್ಲಿ ಮಲ್ಲಿಕಾ ತನ್ನ ಬಟ್ಟೆ ಒಗೆದು ಒಣ ಹಾಕಿರೋದು ಕಾಣಿಸಿತು ಅಂತೆ...

    ಗಾರ್ದಭಗಳು ಅಲ್ಲಿ ಹೋಗಿ ನೋಡಲಾಗಿ ಒಂದು ಚಿಕ್ಕ ಕರ್ಚಿಪ್ ಹಾಗೂ ಚಿಕ್ಕಮಕ್ಕಳಿಗೆ ತೊಡಿಸೋ ಚೆಡ್ಡಿ ಇತ್ತಾಂತೆ..ಅದಕ್ಕೆ ಮಲ್ಲಿಕಾ 'ಗಾಂಧಿ ಹೇಳಿದಂಗೆ simple living high thinking'ಅಂದಳಂತೆ..

    ಪ್ರತ್ಯುತ್ತರಅಳಿಸಿ
  7. ಶಿವ್ ಅವರೆ,
    ಮಲ್ಲಿಕಾ ಬಟ್ಟೆ ಅಷ್ಟೊಂದು ಪ್ರಮಾಣದಲ್ಲಿರುತ್ತದೆಯೇ ಎಂಬುದೂ ನಂಗೆ ಶಂಕೆಗೆ ಕಾರಣ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D