ಬೊಗಳೆ ರಗಳೆ

header ads

Canne: ಬಿಚ್ಚೋ ಮನಸ್ಸಿಂದ ನೆಗೆದುಬಿದ್ದ ಖಾನ್!

(ಬೊಗಳೂರು ಸಿನಿಕ ಬ್ಯುರೋದಿಂದ)
ಬೊಗಳೂರು, ಜು.18- ಒಮ್ಮೊಮ್ಮೆ ಬಾಟಮ್ ಲೆಸ್ ಆಗಿ, ಮತ್ತೊಮ್ಮೊಮ್ಮೆ ಟಾಪ್ ಲೆಸ್ ಆಗಿ ಹಾಗೂ ಹೆಚ್ಚಾಗಿ ಎಲ್ಲವೂ ಲೆಸ್ ಆಗಿ ಸುದ್ದಿ ಮಾಡುತ್ತಿದ್ದ, ಭಾರತದಿಂದ ಸ್ವಂತ ಊರಿಗೆ ರವಾನೆಗೊಂಡ ನೆಗರ್ ಖಾನ್ ಎಂಬ ಅರೆಬರೆ ಉಡುಗೆಯ ಬೆಡಗಿ, ಕ್ಯಾನೆ ಚಿತ್ರೋತ್ಸವದಲ್ಲಿ Canneಯಲ್ಲೂ I can ಎಂದು ಭರ್ಜರಿ ಸುದ್ದಿ ಮಾಡಿದ ಸಂಗತಿ ಇಲ್ಲಿ ವರದಿಯಾಗಿರುವುದು ಬೊಗಳೆ ಬ್ಯುರೋದ ಗಮನಕ್ಕೆ ತಡವಾಗಿ ಬಂದಿದೆ.

ಮೈಮೇಲಿನ ಐಟಂಗಳನ್ನು ಕಳಚುತ್ತಲೇ ಇತ್ತೀಚೆಗೆ ಐಟಂ ಗರ್ಲ್‌ಗಳು ಸುದ್ದಿ ಮಾಡುತ್ತಿರುವುದರಿಂದ ಈ ರದ್ದಿ ಸುದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಈ ಬಗ್ಗೆ, ಗಂಡ ಸಾಹಿಲ್‌ನಿಂದ ಬೇರೆಯಾಗಿ ಪ್ಯಾರಿಸ್ ಹಿಲ್ಟನ್‌ಳನ್ನು ತನ್ನ ರೋಲ್ ಮಾಡೆಲ್ ಆಗಿ ಜಪಿಸುತ್ತಿರುವ ನೆಗರ್‌ಳನ್ನು ಮಾತನಾಡಿಸಲು ನೇರವಾಗಿ ನಾರ್ವೇಗೆ ತೆರಳಿದ ಅಸತ್ಯಾನ್ವೇಷಿಗೆ ಸ್ವಾಗತ ನೀಡದೆ ನೆಗರುವಂತೆ ಮಾಡಿದ ನೆಗರ್ ಖಾನ್ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸಲಾಯಿತು. ಅದಕ್ಕೆ ಆಕೆ ನೀಡಿದ ಉತ್ತರ ಹೀಗಿದೆ:

Cannes ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈಯಂಥವರಿಗೆ ಮತ್ತು ಬಾಲಿವುಡ್ ಮತ್ತಿತರ ವಿದೇಶೀ ನಟಿಯರಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ. ಬಾಲಿವುಡ್ ಚಿತ್ರಗಳ ಭರ್ಜರಿ ಪ್ರದರ್ಶನಕ್ಕೆ ನಮ್ಮ " ಭರ್ಜರಿ ಪ್ರದರ್ಶನ"ವೇ ಕಾರಣ ಎಂಬುದನ್ನು ಯಾರೂ ಮರೆಯಲಾರರು. ಹೀಗಿರುವಾಗ Canne ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಮ್ಮನ್ನು ಕಡೆಗಣಿಸುವುದೇಕೆ? ಇದೇ ಕಾರಣಕ್ಕೆ ಅಭಿಮಾನಿಗಳಿಗೆ ಗಾಳಿಯಲ್ಲಿ ಕಿಸ್ ಕೊಡುವಾಗ ಮೇಲುಡುಗೆ ಸ್ವಲ್ಪ ಸರಿಸಿದ್ದೆ, ಜನರೆಲ್ಲಾ ಅದನ್ನೇ ದೊಡ್ಡ ಸುದ್ದಿ ಮಾಡಿದ್ದಾರೆ. ಇದರಿಂದಾಗಿ ನಮ್ಮ ಪ್ರಾಶಸ್ತ್ಯವೇನು ಎಂಬುದು ಜಗತ್ತಿಗೆ ತಿಳಿಯಲಿಲ್ಲವೇ? ಎಂದಾಕೆ ಹೆಮ್ಮೆಯಿಂದಲೇ ಪ್ರಶ್ನಿಸಿದ್ದಾಳೆ.

'ಎಷ್ಟಿದ್ದರೂ ನನ್ನದು ಬಿಚ್ಚು ಮನಸ್ಸು. ಅದು ಬಿಚ್ಚೋ ಮನಸ್ಸು ಕೂಡ' ಎಂದಿರುವ ಆಕೆಯ ಕುರಿತು, ಬಾಲಿವುಡ್ ರಸಿಕರಿಗೊಂದು ರಸವತ್ತಾದ ಸುದ್ದಿ. ನೆಗರ್ ಖಾನ್ ಮತ್ತೆ ಭಾರತಕ್ಕೆ ಶೀಘ್ರವೇ ನೆಗೆದುಬೀಳಲಿದ್ದಾಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ಬೊಗಳೆ swamygale!!!!!
    ನೆಗರ್ ಖಾನ್ & co tanna ಭರ್ಜರಿ ಪ್ರದರ್ಶನninda ಜನರೆಲ್ಲಾ ನೆಗರುವಂತೆ maduttale bidi...adu nimagu ನೆಗರುವಂತೆ madiddannu keli neevu, namma tara normal agiddara anta confirm ayitu bidi.

    e sudddigu matte sada medianalli mincho rakhi sawantgo endaru sambanda anta annodu yaske prasne agibittede.

    ಪ್ರತ್ಯುತ್ತರಅಳಿಸಿ
  2. ಈ ವೊಮ್ಮ ಭಾರ್ತಕ್ಕೆ ಬತ್ತಾವ್ಳೆ. ಸಂದಾಕಿದೆ ಸುದ್ದಿ.

    ಬಾಲಿವುಡ್ ನಲ್ಲಿ, ಇನ್ನು ಮುಂದೆ(ಯಾವ್ದರ ಎಂದು ಕೇಳಬೇಡಿ), ಯಾರಾರು ಬಿಚ್ಚೊಲೆ ಗೌರಮ್ಮರಾದರೆ, "ನಿನ್ನ ಮೈ ಮೇಲೆ ನೆಗರ್ ಬಂದವ್ಳ" ಅಂತ ಕೇಳ್ ಬೊಹುದೇನೊ?

    ಭೂತ

    ಪ್ರತ್ಯುತ್ತರಅಳಿಸಿ
  3. ಮಹಾನ್ ತೋಷ್ ಅವರೆ,
    ನೆಗರ್‌ಖಾನ್ ಇರೋ ಊರಲ್ಲಿ ಬೊ-ಗಳೆ‌ಯನ್ನು ಸ್ವಾಮಿ-ಗಳೆ ಅಂತ ಮಾಡಿದ್ದೇಕೆ ಎಂಬುದಿನ್ನೂ ಅರ್ಥವಾಗುತ್ತಿಲ್ಲ....!

    ರಾಖಿ ಸಾವಂತ್ ಈಗಾಗಲೇ ಸಾಕೀ ವಸ್ತ್ರಾ ಅಂತ ಹೇಳಿದ್ದನ್ನು ನಾವೀಗಾಗಲೇ ವರದಿ ಮಾಡಿದ್ದೇವೆ.

    ಪ್ರತ್ಯುತ್ತರಅಳಿಸಿ
  4. ಭೂತೋತ್ತಮರೇ,

    ಭಾರತದಲ್ಲಿ ನೆಗರಲು ಬರುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಭೂತ ಚೇಷ್ಟೆ ಜೋರಾಗಿದೆ ಅಂತ ಕೇಳಿಬಂದಿದೆ.
    ನಿಜವೇ ಅಂತ ಸ್ವಲ್ಪ ವಿಚಾರಿಸಿ ನೋಡ್ತೀರಾ?

    ಪ್ರತ್ಯುತ್ತರಅಳಿಸಿ
  5. Cannesಗಿಂತ ಬಟ್ಟೆ ಬಿಚ್ಚೋಕೆ ಅಲ್ಲಾಲ್ಲ ಬಟ್ಟೆ malfunctionಗೆ ಒಳ್ಳೆ ಜಾಗ ಬೇಕಾ !

    ಇದೀಗ ಬಂದ ಸುದ್ದಿಯಲ್ಲಿ..ನೆಗರ್ ಭಾರತಕ್ಕೆ ಬರುವುದಕ್ಕೆ ಎನೇನು ಎರ್ಪಾಡುಗಳು ಬೇಕೋ ಅದೆಲ್ಲವನ್ನೂ ಅಸತ್ಯಿಗಳೇ ನಿರ್ವಹಿಸುತ್ತಿದ್ದಾರಂತೆ.

    ಪ್ಯಾರಿಸ್ ಹಿಲ್ಟನ್ ‍ಳನ್ನು ಗುರಿ ಯಾಗಿಸಿಕೊಂಡಾಕೆ ಅದೇ ಹಿಲ್ಟನ್ ಶೈಲಿಯಲ್ಲಿ 'ಓನ್ ಇವಿನಿಂಗ್ ಇನ್ ನೆಹರ್' ಮಾಡಬಹುದೇ?
    ಅಸತ್ಯಿಗಳೇ, ನಿಮಗೆ ಅದರ ಪ್ರತಿ ಸಿಕ್ಕರೆ ನನಗೆ ಕಳುಹಿಸಲು ಮರೆಯಬೇಡಿ :)

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ನೆಗರ್ ಖಾನ್ ಭಾರತಕ್ಕೆ ಬರುವುದಕ್ಕೂ, ನೀವು ನಯಾಗರವನ್ನು ನೆಗರ ಎಂದು ಹೆಸರು ಬದಲಾಯಿಸಲು ಸಂಚು ಮಾಡಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಅಂತ ನನಗೆ ಶಂಕೆ ಬಂದಿದೆ.

    ಹ್ಯಾರಿಸ್ ಪಿಲ್ಟನ್ ಜತೆಗೆ ಹೋಗಿದ್ದೀರ, ಈಗ ನೆಹರ್ ಜತೆಗೆ ಒಂದು ಇವ್ನಿಂಗ್ ಹೋಗುವ ನಿಮ್ಮ ಆಲೋಚನೆಗೆ ನನ್ನ ಪೂರ್ಣ ಬೆಂಬಲವಿದೆ. ಆದರೆ ಆ ಬೆಂಬಲವನ್ನು ನನ್ನಲ್ಲೇ ಇಟ್ಟುಕೊಳ್ಳುವೆ, ನಿಮಗೆ ಕೊಡಲಾರೆ. :)

    ಪ್ರತ್ಯುತ್ತರಅಳಿಸಿ
  7. ಇಲ್ಲಿ ಏನು ನಡೆಯುತ್ತಿದೆ ಎಂದೇ ನನಗರ್ಥ ಆಗ್ತಿಲ್ಲ. ಅಸತ್ಯಾನ್ವೇಷಿಗಳು ಏನೋ ಸಂಚು ಮಾಡುತ್ತಿರುವಂತಿದೆ. ನಮ್ಮ ಕಡೆ ಜನಗಳನ್ನು ಕಳುಹಿಸಿ ವಿಚಾರಿಸಿಕೊಳ್ಳಬೇಕು.

    ನೆಗರ್ ನೆಗೆದು ಬಿದ್ದು ಹೋಗ್ಲಿ ಎಂದು ಇಲ್ಲೊಂದು ಅಜ್ಜಿ ಹೇಳ್ತಿದೆ.

    ಪ್ರತ್ಯುತ್ತರಅಳಿಸಿ
  8. ಮಾವಿನರಸರೆ,
    ನೆಗರ್ ಖಾನ್ ನೆಗೆಯುತ್ತಾ ನಿಮ್ಮ ಮುಂಬಯಿ ಮನೆ ಬಾಗಿಲಿಗೇ ಬೀಳುತ್ತಾಳೆ ಎಂಬುದು ನಿಮಗೆ ಸಿಹಿ ಸುದ್ದಿಯಾಗದೆ?

    ಪ್ರತ್ಯುತ್ತರಅಳಿಸಿ
  9. ಅನಾಮಧೇಯಜುಲೈ 21, 2006 3:28 AM

    Very pretty design! Keep up the good work. Thanks.
    »

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D