(ಬೊಗಳೂರು ಅರಾಜಕೀಯ ಬ್ಯುರೋ)
ಬೊಗಳೂರು, ಜು.28- ರಾಜಕಾರಣಿ ಮತ್ತು ಪತ್ರಕರ್ತರು ಇಬ್ಬರೂ ಒಂದೇ ಅಂತ ಹೇಳಿಕೆ ನೀಡಿ ಇಬ್ಬರ ಸಂಬಂಧವನ್ನು ಬಟಾಬಯಲಾಗಿಸಿದ, ಕರ್ನಾಟಕದಲ್ಲಿ ಕೆಲವೇ ಕ್ಷಣಗಳ ಕಾಲ ಸಚಿವರಾಗಿದ್ದ ಮಾಜಿ ಅರೆ-ಕ್ಷಣ ಸಚಿವ ಬಿ.ಕೆ.ಚಂದ್ರಶೇಖರ್ ವಿರುದ್ಧ ಪುತ್ರಕರ್ತರೆಲ್ಲಾ ಗಹಗಹಿಸಿ ಕೆಂಡಕಾರಿದ ಪ್ರಸಂಗ ವರದಿಯಾಗಿದೆ.ರಾಜಕಾರಣಿಗಳಿಗೆ ಪತ್ರಕರ್ತರ ಮೇಲೆ ಗೌರವವೇ ಇಲ್ಲದಂತಾಗಿದೆ ಅಂತ ಬೀಕೇಸೀ ಅವರು ಬಹಿರಂಗವಾಗುತ್ತಿರುವ ಸತ್ಯವನ್ನು ಪೂರ್ತಿ ಹೊರಗೆಳೆದದ್ದಕ್ಕೆ ಖಂಡಿಸಿರುವ ಪುತ್ರಕರ್ತರು, ರಾಜಕಾರಣಿಗಳ ಮೇಲೆ ಪತ್ರಕರ್ತರಿಗೆ ಗೌರವ ಇನ್ನೂ ಇದೆ ಅಂತ ಇಲ್ಲಿ ತೋರಿಸಿಕೊಟ್ಟಿದ್ದೇವೆ. ವೇತನ ಮಂಡಳಿ ಜಾರಿ ಆಗ್ರಹಿಸಿ ಕಟ್ಟಾ ಭಾರತೀಯರಾದ ನಾವು ಇಟಲಿ ಮೂಲದ ಕೈ ಒಡತಿಯ ಮೊರೆ ಹೊಕ್ಕಿಲ್ಲವೇ? ಇದು ನಾವು ರಾಜಕಾರಣಿಗಳಿಗೆ ನೀಡುವ ಗೌರವವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಪತ್ರಕರ್ತರಿಗೆ ಸೈಟು ಕೊಡಲಾಗುತ್ತದೆ, ಸೈಟಿನ ಗಡಿ ದಾಟಿ ಬೇರೆ ಸೌಲಭ್ಯಕ್ಕೂ ಕೈ ಚಾಚುತ್ತಾರೆ ಎಂದು ಬೀಕೇಶೀ ಆರೋಪಿಸಿದ್ದು, ಅದು ಯಾವ ಸೈಟು, ಬ್ಲಾಗ್ ಸೈಟೋ, ವೆಬ್ ಸೈಟೋ ಅಥವಾ ಸೈಟ್ ಸೀಯಿಂಗ್ ಮಾತ್ರವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಯ ವಿಷಯದಲ್ಲಿ ಒಂದೇ ಒಂದು ಒಳ್ಳೆ ವರದಿಗಳು ಬರುತ್ತಿಲ್ಲ ಎಂದು ಮಾಜಿ ಸಚಿವರು ಹೇಳಿದರೂ, ಮುಖ ಬೇರೆಡೆ ತಿರುಗಿಸಿ, ರಾಜಕಾರಣಿಗಳು ಭ್ರಷ್ಟಾಚಾರ ನಿರತರಾಗಿದ್ದಾರೆ, ಒಳ್ಳೆ ಕೆಲಸ ಮಾಡಲು ಸಮಯವಾದರೂ ಎಲ್ಲಿದೆ ಎಂದು ನೆನಪಿಸಿಕೊಂಡರು. ಇದೂ ಅಲ್ಲದೆ ಶಾಸನ ಸಭೆಯಲ್ಲಿ ಕೋಲಾಹಲ, ಆರೋಪ ಪ್ರತ್ಯಾರೋಪಗಳ ಟೇಪುಗಳನ್ನೇ ಯಾವಾಗಲೂ ತಿರುಗಿ ತಿರುಗಿ ಹಾಕಲಾಗುತ್ತಿದೆ ಎಂಬುದನ್ನು ನೆನೆದು ಯಾರಿಗೂ ಗೊತ್ತಾಗದಂತೆ ಸುಮ್ಮನಾಗಿಬಿಟ್ಟರು.
ಜಾತಿ ಆಧಾರಿತವಾಗಿ ಪತ್ರಕರ್ತರು ಹುಟ್ಟಿಕೊಂಡಿರುವುದು ಕೆಟ್ಟ ಬೆಳವಣಿಗೆ ಅಂತ ಮಾಜಿಗಳು ಹೇಳಿದ್ದಾರೆ. ವಾಸ್ತವವಾಗಿ ಅವರು "ಜಾತಿ ಆಧಾರಿತ" ಎಂಬ ಶಬ್ದವನ್ನೇ ಪ್ರಯೋಗಿಸಿರಲಿಲ್ಲ ಎಂಬುದು ಬೊಗಳೂರು ಬ್ಯುರೋದ ತನಿಖೆಯಿಂದ ಗೊತ್ತಾಗಿದೆ.
ಪುತ್ರಕರ್ತರು ಹುಟ್ಟಿಕೊಂಡರೆ ರಾಜಕಾರಣಿಗಳಿಗೇ ನಷ್ಟವಲ್ಲವೇ? ಅನ್ನೋದು ಜಿಜ್ಞಾಸೆಯ ವಿಷಯ.
8 ಕಾಮೆಂಟ್‌ಗಳು
ರಾಜಕಾರಣಿ-ಪತ್ರಕರ್ತೆ ಸಂಬಂಧ ಹಳೆಯದಲ್ವೇ? ಅಥವಾ ಸುದ್ದಿ ಹಳೆಯದು, ಬೊ-ರ ಪತ್ರಕರ್ತರಿಗೆ ರಾಜಕಾರಣಿಯೊಂದಿಗೆ ಹೊಸ ಸಂಬಂಧವಾ? ಅಂದ ಹಾಗೆ ನಿಮ್ಮ ತೆಕ್ಕೆಗೆ ಬೀಳುತ್ತಿರುವ ಪತ್ರಕರ್ತರು ಯಾರು? (ಕಿವಿಯಲ್ಲಿಯೇ ಹೇಳಿ ಪರವಾಗಿಲ್ಲ). ಶಿಕೆಡಿ (ರಾಜಕಾರಣಿ) ಅದ್ಯಾರೋ ಟಿವಿಯಲ್ಲಿ ಬರ್ತಿದ್ದವರ (ಅಮ್ಮನವರ ಹೆಸರು ಮರೆತಿರುವೆ) ವಿಷಯವೇ ನಿಮಗೆ ಇಂದಿನ ಗ್ರಾಸ ಎನ್ನಿಸುತ್ತಿದೆ. ಮುಂದೆ ಅವರಿಬ್ಬರೂ ಜಗಳ ಆಡಿ ಬೀದಿಗೆ ಬಂದಿದ್ದ ವಿಷಯ ಎಲ್ಲರಿಗೂ ಗೊತ್ತಿದೆ.
ಪ್ರತ್ಯುತ್ತರಅಳಿಸಿಛೇ....ಛೇ... ಮಾವಿನರಸರೆ,
ಪ್ರತ್ಯುತ್ತರಅಳಿಸಿನೀವು ಅಂಥಾ ಆರಮವಾಗಿರೋ ತೇಜಸ್ಸುಳ್ಳ ಮಂದಿಗೆ ಮತ್ತು ಕೇಡಿ-ಶೀ ಅವರ ಮೇಲೆಲ್ಲಾ ನೈಜಾರೋಪ ಯಾಕೆ ಹೊರಿಸುವುದು?
ಅದಕ್ಕೂ, ಬೊ.ರ. ಪತ್ರಕರ್ತರಿಗೂ ಹೋಲಿಸ್ತೀರಿ ಯಾಕೆ.
ಮತ್ತೆ ನೀವು,
ಸುದ್ದಿ ಹಳೆಯದಾದರೇನು
ರದ್ದಿ ನವನವೀನ ಅಂತ ಹಾಡು ಕೇಳಿಲ್ವೇ?
ಯಾವ ಪತ್ರಕರ್ತರು -ಮುದ್ರಣ ಮಾಧ್ಯಮದವರೋ ಅಥವಾ ನಮ್ಮ ಅಸತ್ಯಾನ್ವೇಶಿಯಂತಹ ವರ್ಚುವಲ್ ಪತ್ರಕರ್ತರೋ ಎಂಬುದನ್ನು ಸ್ವಲ್ಪ ವಿಶದೀಕರಿಸುತ್ತೀರಾ?
ಪ್ರತ್ಯುತ್ತರಅಳಿಸಿ-ಪಬ್
ಅನಾಮಧೇಯ ತಾಣದಿಂದ ಕಾಮೆಂಟಿಸುವ ಪಬ್ಬಿಗರೇ,
ಪ್ರತ್ಯುತ್ತರಅಳಿಸಿಪುತ್ರಕರ್ತರು ಎಂದರೆ ಮದಿರಾ(ಣ) ಮಾಧ್ಯಮದವರು ಮತ್ತು Wah-Wah-ಅರಚುವಳ್ ಪತ್ರಕರ್ತರು ಅಂತ ವಿಷಾದದಿಂದ ಹೇಳುತ್ತಿದ್ದೇವೆ.
ಹಾಂ..ಈಗ ಗೊತ್ತಾಯಿತು ಅಸತ್ಯಿಗಳಿಗೆ ಹೆಂಗೆ ಈ ಬ್ಲಾಗ್ ಸೈಟ್ ಸಿಕ್ತು ಅಂತಾ...ಅದರ ಜೊತೆ ಮತ್ತಾವ ಸೌಲಭ್ಯ ನೀವು ತಗೊಂಡಿದಿರಿ ??
ಪ್ರತ್ಯುತ್ತರಅಳಿಸಿಇನ್ಮುಂದಾದರೂ ಅತ್ಯಂತ ಗೌರವದಿಂದ ರಾಜಕಾರಣಿಗಳ ಬಗ್ಗೆ ಬರೆಯದಿದ್ದರೆ ನಿಮ್ಮ ಬ್ಲಾಗ್ ಸೈಟ್ ಅನ್ನು ಕಸಿದುಕೊಳ್ಳಲ್ಲಾಗುವದೆಂದು ಅದೇ ಬಿಕೆಸಿ ಅವರು ಹೇಳಿದರಂತೆ..
ಶಿವ್ ಅವರೆ,
ಪ್ರತ್ಯುತ್ತರಅಳಿಸಿಸಿಕ್ಕಿದ ಬ್ಲಾಗ್ ಸೈಟು, ಬ್ಲಾಕ್ ಆಗೋದು ಯಾಕೆ ಅಂತಾನೂ ಗೊತ್ತಾಗಿದೆ...
ಆದರೆ ಬೇರೆ ಯಾವ ಸೌಲಭ್ಯ ಅನ್ನೋದನ್ನು ಮಾತ್ರ ಹೇಳೋಕಾಗಲ್ಲ...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿGreets to the webmaster of this wonderful site. Keep working. Thank you.
ಪ್ರತ್ಯುತ್ತರಅಳಿಸಿ»
ಏನಾದ್ರೂ ಹೇಳ್ರಪಾ :-D