ಬೊಗಳೆ ರಗಳೆ

header ads

ಸರ್ವ ಅಶ್ಲೀಲ ಶಿಕ್ಷಾ ಅಭಿಯಾನ !

(ಬೊಗಳೂರು ರಸಿಕ ಬ್ಯುರೋದಿಂದ)

ಬೊಗಳೂರು, ಜು.26- ಭಾರತ ಸರಕಾರದ ಅತ್ಯಮೂಲ್ಯವಾದ ಸರ್ವ ಶಿಕ್ಷಾ ಅಭಿಯಾನವು ಯಶಸ್ವಿಯಾಗಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇದರ ಹಿಂದೆ ಏನೋ ಇರಬೇಕು ಎಂಬ ಶಂಕೆ ಬಂದ ಕಾರಣ ಬೊಗಳೆ ರಗಳೆ ಬ್ಯುರೋದ ರಸಿಕರ ತಂಡವು ಕೊಯಮತ್ತೂರಿಗೆ ತೆರಳಿತು.

ಹೆಸರು ಕೇಳಿದಾಗಲೇ ಅತ್ತಿತ್ತ ಆಲೋಚಿಸದೆ ಮತ್ತೇರಿಸುವ ಕೊಯಮತ್ತೂರಿನತ್ತ ಹೊರಟಿದ್ದರೂ ಅಲ್ಲಿ ತಲುಪಿದಾಗ ದೊರೆತ ಅಸತ್ಯದಿಂದಾಗಿ ಮತ್ತೂ ಮತ್ತೇರಿತ್ತು.

ಶಾಲೆಗಳಿಗೆ ಸರ್ವರ ಶಿಕ್ಷೆಗಾಗಿ ಇರುವ ಕಾರ್ಯಕ್ರಮದ ವಿತರಣೆಗೆ ನೀಡಲಾದ ಸರಂಜಾಮುಗಳು ಸರ್ವರ ಶಿಕ್ಷೆಗಾಗಿ ಅಲ್ಲ, ರಸಿಕರ ರಕ್ಷೆಗಾಗಿ ಎಂಬ ಅಂಶವು ಬಯಲಾಯಿತು.

ನಡೆದದ್ದಿಷ್ಟು. ಸರ್ವ ಶಿಕ್ಷಾ ಅಭಿಯಾನಕ್ಕೆ ಪೂರೈಸಿದ ಸಾಮಗ್ರಿಗಳಲ್ಲಿ ಅಶ್ಲೀಲ ಎಂದು ಯಾರೋ ಕೆಲವು ಕಿಡಿಗೇಡಿಗಳು ಕರೆಯುವ ಕೆಲವು ಸಿ.ಡಿ.ಗಳಿದ್ದವು. ಬಹುಶಃ ಇದು ವಯಸ್ಕರ ಶಿಕ್ಷಣದ ಸಾಮಗ್ರಿ ಇರಬಹುದು ಎಂಬುದು ಬೊ.ರ. ಬ್ಯುರೋದ ಪ್ರಥಮ ಮಾಹಿತಿ ವರದಿ (ಎಫ್ಐಆರ್).

ಆದರೆ, ಇವುಗಳನ್ನು ಉದ್ದೇಶಪೂರ್ವಕವಾಗಿ ವಿತರಿಸಲಾಗಿದೆ ಎಂದು ಗೊತ್ತಾಗಿ ಬಿಟ್ಟಿತು. ಸರ್ವ ಶಿಕ್ಷೆ ಅಭಿಯಾನದ ಹೆಸರು ಕೇಳಿಯೇ ಯಾರೂ ಬಾರದ ಕಾರಣ, ಒಟ್ಟಿನಲ್ಲಿ ಸರಕಾರದ ಹಣ ಬಿಡುಗಡೆಯಾಗಬೇಕು, ಅದರಲ್ಲಿ ಅಲ್ಪಮೊತ್ತದ ಹಣ ಆಯಾ ಉದ್ದೇಶಕ್ಕೆ ಖರ್ಚಾಗಬೇಕು, ಉಳಿದದ್ದು ನಮ್ಮ ಜೇಬಿಗೆ ಸೇರಬೇಕು ಎಂಬ ಪ್ರಾಮಾಣಿಕ ಮನಸ್ಸಿನಿಂದ ಸ್ಥಳೀಯ ಪುಡಾರಿಗಳು ಈ ವ್ಯವಸ್ಥೆ ಮಾಡಿದ್ದರು.

ಸರಿಯಾಗಿ ಹಾಜರಾತಿ ತೋರಿಸಿದರೆ ಸರಕಾರದಿಂದ ಬಿಡುಗಡೆಯಾಗುತ್ತದೆ. ಇದನ್ನು ಬಳಸಿ ಇನ್ನಷ್ಟು ಅಹ-ಶ್ಲೀಲವಾದ ಸಿಡಿಗಳನ್ನು ರಚಿಸಿ, ಶಿಕ್ಷೆ ಅಭಿಯಾನಕ್ಕೆ ಹೆಚ್ಚಿನ ಆಕರ್ಷಣೆ ತುಂಬಬಹುದು ಎಂಬುದು ಪರಮ ಉದ್ದೇಶ. ಯಾರು ಕೂಡ ದೂರು ನೀಡುವ ಗೋಜಿಗೆ ಹೋಗಿಲ್ಲ, ಮತ್ತು ಪೊಲೀಸರು ಕೂಡ ಯಾವುದೇ ಕೇಸು ದಾಖಲಿಸಿಲ್ಲ ಎಂಬುದು ಉಭಯ ಪಕ್ಷಗಳ ಸಾಮಾಜಿಕ ಕಾಳಜಿಯನ್ನು ಬಿಂಬಿಸುವ ಅಂಶಗಳು.

ಈ ಕಾರಣಕ್ಕೆ, ದಣಿದ ತನು-ಮನಗಳಿಗೆ ಮನರಂಜನೆ ಬೇಕೆಂಬ ಜನರ ಮತ್ತು ಪೊಲೀಸರ ಮನೋಭಾವಕ್ಕೆ ಸಾಮಾಜಿಕ ಕಳಕಳಿ ಪ್ರಶಸ್ತಿ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆದರೆ ಬಾಲಕಿಯರಿಗೆ ವಿತರಿಸಲಾದ ಸಾಮಗ್ರಿಗಳಲ್ಲಿ ಮಾತ್ರ ಇಂಥ ಸಿ.ಡಿ.ಗಳಿದ್ದವೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಮತ್ತೊಂದು ವಿಷಯ- ಸಿ.ಡಿ.ಮಾತ್ರ ಇದ್ದದ್ದೇ ಅಥವಾ ಇನ್ನೂ ಏನೇನೋ ಇದ್ದವೋ ಎಂಬುದಿನ್ನೂ ತನಿಖೆಗೊಳಪಡಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಮತ್ತೂರಿನಲ್ಲಿ ಕೊಯ್ದ ಸಿಡಿ ಕೊಯಮತ್ತೂರಿಗೆ ಹೋಗಿದೆಯೇ? ಇನ್ನೂ ಯಾರಿಗೂ ಈ ವಿಷಯ ತಿಳಿಯದು ಎಂದು ನಾನು ತಿಳಿದಿದ್ದೆ. ಅದು ಹೇಗೆ ಬೊ-ರರಿಗೆ ತಿಳಿಯಿತು? ನಿಜವಾಗ್ಲೂ ನಿಮ್ಮ ಆಂಟೆನಾ ಸ್ಟ್ರಾಂಗ್ ಆಗಿದೆ. ಅಂದ ಹಾಗೆ ಸಿಡಿ ನಿಮಗಿನ್ನೂ ಸಿಕ್ಕಿಲ್ವಾ? ನಾನು ಕಳುಹಿಸಬೇಕೇ ತಿಳಿಸಿ.

    ಪ್ರತ್ಯುತ್ತರಅಳಿಸಿ
  2. ನೋಡಿ ಮಾವಿನಯಸರೆ,
    ಹೇಗೆ ನಾನು ಹೊಗೆ ಹಾಕಿದೆ...
    ಈಗ ಇಲಿ ಬಿಲದಿಂದ ಬರುವಂತೆ ಮಾಡಿದೆ...!
    ಸಿ.ಡಿ.ಯ ಮೂಲ ಎಲ್ಲಿ ಅಂತ ಪತ್ತೆಯಾಯಿತು.

    ಟಾಟಾ... ಪೊಲೀಸ್ ಸ್ಟೇಶನಿಗೆ ಹೊರಡುತ್ತಿದ್ದೇನೆ...
    ನೀವು ನನ್ನ ಜತೆ ಬಂದರೆ ಒಳ್ಳೆಯದು... ಎಳೆದುಕೊಂಡು ಹೋಗುವ ತ್ರಾಸ ಇರುವುದಿಲ್ಲ...!!!!

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಜುಲೈ 27, 2006 12:23 AM

    ಅಸತ್ಯಾನ್ವೇಷಿಗಳೇ,ಇಂತಹ ಸುದ್ದಿಗಳು ನಿಮಗೆಲ್ಲಿ ಸಿಗತ್ತೆ ಅಂತ ಆಶ್ಚರ್ಯ ಆಗುತ್ತಿದೆ. ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭವಾಗುವ ಯೋಜನೆಗಳನ್ನು ನಮ್ಮ ಜನ ಹೇಗೆ ಹಾಳು ಮಾಡ್ತಾರಲ್ಲ ಎಂದು ಬೇಜಾರೂ ಕೂಡ.

    ಪ್ರತ್ಯುತ್ತರಅಳಿಸಿ
  4. ಶ್ರೀ ತ್ರಿ ಅವರೆ,

    ಸತ್ಯವು ಅಸತ್ಯ ಎಲ್ಲಿ ಆಗುತ್ತದೋ, ಅಲ್ಲಿ ಅಸತ್ಯಾನ್ವೇಷಣೆಯೂ ಇರುತ್ತೆ.

    ಇದು ಬಿಸಿ ಮುಟ್ಟಿಸುವ ಅಭಿಯಾನ. ಏನಂತೀರಿ?

    ಪ್ರತ್ಯುತ್ತರಅಳಿಸಿ
  5. ಕೊಟ್ಟೋರೋ ಎನು ಕೊಡಬೇಕೋ ಅದನ್ನು ಕೊಟ್ಟು ಆರಾಮಗಿದ್ದಾರೆ,ತಗೊಂಡರೂ ಎನೋ ತಗೋಬೇಕೋ ಅದನ್ನ ತಗೊಂಡು ಜ್ಙಾನ ಬೆಳಸಿಕೊಳ್ಳುತ್ತಿದ್ದಾರೆ.ನಿಮಗೆ ಯಾಕೇ ಇದರ ಬಗ್ಗೆ ಕಾಳಜಿ !

    ನೋಡಿ ಎಷ್ಟು ಮುತುವರ್ಜಿಯಿಂದ ಜನತೆಗೆ ಬೇಕಾಗುವ ಶಿಕ್ಷಣವನ್ನು ನೀಡುತ್ತಿದ್ದಾರೆ..

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ಕಾಳಜಿ ಯಾಕೇಂತ ಕೇಳಿದ್ರೆ, ನಾವು ಉತ್ತರಿಸಲೇಬೇಕಾಗುತ್ತದೆ.
    ಜ್ಞಾನ ಹೆಚ್ಚಿಸಿಕೊಳ್ಳಲು....!!!!!!

    ಪ್ರತ್ಯುತ್ತರಅಳಿಸಿ
  7. Interesting website with a lot of resources and detailed explanations.
    »

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D