ಬೊಗಳೆ ರಗಳೆ

header ads

ಇಲ್ಲಿ ರೈಲು ಸ್ಫೋಟ, ಅಲ್ಲಿ ಜನಸಂಖ್ಯಾ ಸ್ಫೋಟ !

(ಬೊಗಳೂರು ಆ-ಸ್ಫೋಟ ಬ್ಯುರೋದಿಂದ)
ಬೊಗಳೂರು, ಜು.13- ವಿಶ್ವದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿದ್ದಂತೆಯೇ ಪಾಕಿಸ್ತಾನಿ ಉಗ್ರಗಾಮಿಗಳು ಬಾಂಬ್ ಸ್ಫೋಟ ನಡೆಸಿ ಜನಸಂಖ್ಯಾ ಸ್ಫೋಟಕ್ಕೆ ಪ್ರತಿಸ್ಫೋಟ ಮಾಡುವ ತಂತ್ರಗಳನ್ನುಹೆಣೆಯುತ್ತಿದ್ದರೂ ಜನಸಂಖ್ಯೆ ಏಕೆ ಈ ಪರಿಯಾಗಿ ಏರುತ್ತಿದೆ ಎಂಬ ಗುಟ್ಟು ಕೂಡ ರಟ್ಟಾಗಿದೆ.
 
ಈ ತಾಂತ್ರಿಕ ಯುಗದಲ್ಲಿ ಮಹಿಳೆಯರು ಇತ್ತೀಚೆಗೆ ಫಲವತ್ತತೆ ಹೆಚ್ಚಿಸಿಕೊಂಡಿರುವ ಅಂಶ ಮತ್ತು ಪುರುಷರು ಕೇವಲ ಹಣ ಸಂಪಾದನೆಯಲ್ಲಿ ನಿರತರಾಗಿ ಫಲವತ್ತತೆ (ಅಂದರೆ ಪುರುಸೊತ್ತು?) ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಶ ತೀವ್ರ ಚರ್ಚೆಗೆ ಗ್ರಾಸವಾಗಿದೆ.
 
ಈ ಹಿನ್ನೆಲೆಯಲ್ಲಿ ಜನಸಂಖ್ಯಾ ಸ್ಫೋಟ ಎಲ್ಲಿ ಆಗುತ್ತಿದೆ ಎಂದು ಮೂಲ ಕೆದಕಲು ಧಾವಿಸಿದ ಧಾವಿಸಿದ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ ಹೃದಯಾಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.
 
ಆದರೆ ಸಿಬ್ಬಂದಿಯ ತೊಡೆ ಮೇಲಿದ್ದ ಟ್ಯಾಪ್ ಲಾಪ್ ಮೂಲಕ ಇ-ಮೇಲ್ ಆಟೋಮ್ಯಾಟಿಕ್ ಆಗಿ ಹೊರಬಂದು ನಮ್ಮ ಬ್ಯುರೋ ತಲುಪಿದೆ.
 
ಅದರಲ್ಲಿರುವ ಮಾಹಿತಿ ಪ್ರಕಾರ, ಕೇವಲ 63 ವರ್ಷದ ತಾರುಣ್ಯ ಉಕ್ಕಿ ಹರಿದ (ಅಂಥವರಿಗೆ ವೃದ್ಧೆ ಎಂದು ಕರೆಯಲಾಗುತ್ತದೆ) ಅಜ್ಜಿ, ಮುತ್ತಜ್ಜಿಯಾಗುವ ಬದಲು ತಾಯಿಯಾಗಿಬಿಟ್ಟಿದ್ದಾಳೆ. ಮತ್ತಷ್ಟು ಕೂಲಂಕಷವಾಗಿ ಶೋಧಿಸಿದಾಗ, ಈ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಮರಿಮರಿ ಮಕ್ಕಳು ಮರೆಮರೆತು ಹೋಗುವಷ್ಟು ಸಂಖ್ಯೆಯಲ್ಲಿ ಇದ್ದಾರಂತೆ.
 
ಆದುದರಿಂದ ಇವರ ವಂಶ ವೃಕ್ಷಕ್ಕೆ ಸಾಕಷ್ಟು ಗೊಬ್ಬರ ಬಿದ್ದಿದೆ, ಹುಲುಸಾಗಿ ಬೆಳೆಯುತ್ತಿದೆ. ಈ ಗೊಬ್ಬರ ಯಾವುದು ಎಂಬ ಬಗ್ಗೆ ಸಂಶೋಧನೆಗಳು ಆರಂಭವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

18 ಕಾಮೆಂಟ್‌ಗಳು

  1. ಸಂಶೋಧನೆಗಳು adastu beg agali anta nanna kalkaliya vinanti..
    inti nimma
    Mahantesh

    ಪ್ರತ್ಯುತ್ತರಅಳಿಸಿ
  2. ಎಚ್ಚರಿಕೆ. ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟುಕೊಂಡರೆ ನಿಮಗೆ ತೊಂದರೆ ಕಾದಿದೆ. ಈ ಸುದ್ದಿ ಓದಿ. ಅಥವಾ ಜನಸಂಖ್ಯಾ ನಿಯಂತ್ರಣಕ್ಕೆ ನಿಮ್ಮ ಕಾಣಿಕೆ ನೀಡಲು ಆಸಕ್ತರಾಗಿದ್ದಲ್ಲಿ ಲ್ಯಾಪ್‌ಟಾಪ್ ಮಡಿಲಲ್ಲಿ ಇಟ್ಟುಕೊಂಡು ಕೆಲಸ ಮಾಡಿ.

    -ಪವನಜ

    ಪ್ರತ್ಯುತ್ತರಅಳಿಸಿ
  3. ಆ ಗೊಬ್ಬರ ಬೊ-ರ ಬ್ಲಾಗಿನ ನೆಲದ ಮೇಲೆ ಬೀಳದಿರಲಿ ಎಂದು ಆಶಿಸಿ. ಇಲ್ಲದೇ ಇದ್ದರೆ ಸಣ್ಣ ಪುಟ್ಟ ನೂರಾರು ಬೊಗಳೆಗಳು ಹುಟ್ಟಿಕೊಂಡು, ನಾನು ಪ್ರತಿನಿತ್ಯ ಉತ್ತರಿಸಲಾಗೋಲ್ಲ. ನನಗೂ ಗೊಬ್ಬರ ತಿನ್ನಿ ಅಂತ ಮಾತ್ರ ಹೇಳಬೇಡಿ.

    ಪ್ರತ್ಯುತ್ತರಅಳಿಸಿ
  4. ಮಹಾನ್ ಅಂತೇಶರೇ,
    ನಿಮ್ಮ ಕುತೂಹಲವನ್ನು ತಣಿಸುವ ಕಾಲ ಶೀಘ್ರವೇ ಬರಲಿದೆ.

    ಪ್ರತ್ಯುತ್ತರಅಳಿಸಿ
  5. ಪವನಜರೆ,

    ತೊಂದರೆ ಕಾದಿದೆ ಎಂಬ ನಿಮ್ಮ ಎಚ್ಚರಿಕೆಗೆ ಕೃತಘ್ನ(!)ರಾಗಿದ್ದೇವೆ. ಯಾಕಂದ್ರೆ ಲ್ಯಾಪಿನ ಟಾಪ್ ಮೇಲೆ ಅದನ್ನಿರಿಸಿಕೊಂಡರೆ ಏನಾಗುತ್ತದೆ ಎಂಬ ಸತ್ಯವನ್ನು ಬಯಲುಗೊಳಿಸಿ ಜನಸಂಖ್ಯಾ ನಿಯಂತ್ರಣ ಮಾಡದಂತೆ ಮತ್ತು ಲ್ಯಾಪ್ ಟಾಪ್ ಖರೀದಿಸದಂತೆ ಜನರಿಗೆ ಪ್ರಚೋದನೆ ನೀಡಿದ್ದೀರಿ.

    ಲ್ಯಾಪಿನ ಮೇಲೆ ಟಾಪು ಇರಿಸಿದಲ್ಲಿ ಪಾಪು ಆಗದು ಎಂಬುದು ನಿಮ್ಮ ಮಾತಿನರ್ಥವೇ?

    ಪ್ರತ್ಯುತ್ತರಅಳಿಸಿ
  6. ಓಹ್, ಮಾವಿನ ಅರಸರೆ,

    ಮುಂಬಯಿ ಬಾಂಬ್ ಸ್ಫೋಟಕ್ಕಿಂತಲೂ ಜನಸಂಖ್ಯಾ ಸ್ಫೋಟವೇ ದೊಡ್ಡ ಭಯೋತ್ಪಾದನೆ ಎಂಬ ನಿಮ್ಮ ಕಾಳಜಿ ಮೆಚ್ಚುವಂಥದ್ದು.

    ಬೊಗಳಿಸುವವರ ವಂಶವೃಕ್ಷ ಬೆಳೆಯುವಲ್ಲಿ ನಿಮ್ಮ ಆಶ್ರಯದ ಪಾತ್ರ ದೊಡ್ಡದೆಂಬ ಸತ್ಯಾಂಶ ಕೇಳಿದ್ದೇವೆ. ಹೌದೇ?

    ಪ್ರತ್ಯುತ್ತರಅಳಿಸಿ
  7. ಅಸತ್ಯಾನ್ವೆಷಿಗಳೇ ಆಶ್ರಯ ಒಂದು ವಾರದಿಂದ ಅನ್ನ ನೀರು ಕಾಣದೇ ಪಾಳುಬೀಳುತ್ತಿದೆ. ಬರಡೆಮ್ಮೆಯಂತೆ ಅಲ್ಲಿಲ್ಲಿ ಓಡಾಡುತ್ತಿದೆ. ವಂಶವೃಕ್ಷ ಬೆಳೆಸುವಲ್ಲಿ ಅದಕ್ಕಿನ್ನೆಲ್ಲಿ ಪಾತ್ರೆ ಸಿಗುವುದು. ವಿನೋಬಾಜೀಯವರು ನನ್ನ ಮಾತು ಕೇಳ್ತಿರಬೇಕು. ಶಾಂತಮ್ಮ ಪಾಪಮ್ಮ.

    ಪ್ರತ್ಯುತ್ತರಅಳಿಸಿ
  8. ಮಾವಿನರಸರೆ,
    ನಿಮ್ಮ ಆಶ್ರಯಕ್ಕೆ ಒಂದಿಷ್ಟು ಗೊಬ್ಬರ ಹಾಕಲೇ?

    ಪ್ರತ್ಯುತ್ತರಅಳಿಸಿ
  9. ಅನಾಮಧೇಯಜುಲೈ 13, 2006 7:17 PM

    ಪವನಜರೇ,

    ನೀವು ಸುದ್ದಿಗೆ ಲಿಂಕ್ ಕೊಡಲು ಮರೆತೇ ಬಿಟ್ಟಿದ್ದೀರಾ. ಸುದ್ದಿ ಎಲ್ಲಿದೆ?

    -ಪಬ್

    ಪ್ರತ್ಯುತ್ತರಅಳಿಸಿ
  10. ಹೌದಲ್ಲಾ....
    ಪಬ್ಬಿನಲ್ಲಿ ಕುಳಿತವರಿಗೆ ಅದರ ಬಗ್ಗೆ ಆಸಕ್ತಿ ಹುಟ್ಟಿದ್ದು ನಿಜಕ್ಕೂ ಶ್ಲಾಘನೀಯ.

    ಪ್ರತ್ಯುತ್ತರಅಳಿಸಿ
  11. ಅನಾಮಧೇಯಜುಲೈ 14, 2006 1:26 AM

    "ಲ್ಯಾಪಿನ ಮೇಲೆ ಟಾಪು ಇರಿಸಿದಲ್ಲಿ ಪಾಪು ಆಗದು ಎಂಬುದು ನಿಮ್ಮ ಮಾತಿನರ್ಥವೇ?"
    -- ಅಸತ್ಯಾನ್ವೇಷಿ

    Ha ha ha ha!!! :)

    ಪ್ರತ್ಯುತ್ತರಅಳಿಸಿ
  12. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ?
    ಆ ಅಜ್ಜಿ ತಾಯಿಯಾದುದರಲ್ಲಿ ಅಂತ ಆಶ್ವರ್ಯವಿಲ್ಲಾ ಬಿಡಿ...

    ಎಲ್ಲಿಯಾವರಿಗೆ ಇಂತಹ ಮಹಾಮಾತೆಯಾರು ಇರತ್ತಾರೋ ಅಲ್ಲಿಯವರಿಗೆ ಯಾವ ಪಾಕಿಗಳು ನಮ್ಮ ಜನಸಂಖ್ಯೆ ಸ್ಪೋಟಕ್ಕೆ ಪ್ರತಿಸ್ಪೋಟ ಮಾಡಿದರೆ ಏನೂ ಆಗೋಲ್ಲ..

    ಪ್ರತ್ಯುತ್ತರಅಳಿಸಿ
  13. ಹೌದು ತಂದೆ ಯಾರಂತೆ. ??
    ಅಯ್ಯೋ ಬ್ರಿಟಿಷ್ ಮಹಿಳೆಯರು ಗೊಬ್ಬರ ತಿಂತಾರೋ ಏನೊ ?

    ಪ್ರತ್ಯುತ್ತರಅಳಿಸಿ
  14. ಸಿಂಧು,
    ನೀವು ಜೋರಾಗಿ ಹಾ ಹಾ ಅಂತ ಹೇಳಿದ್ದರಿಂದ ನಮ್ಮ ಬೊಗಳೆ ರಗಳೆ ಬ್ಯುರೋದ ಮಾಡಿನ ಹೆಂಚು ಮೇಲಕ್ಕೆ ಹಾರಿದ ಸೋರುತಿಹುದು ಮನೆಯ ಮಾಳಿಗೆ....!

    ತಕ್ಷಣವೇ ಸರಿಪಡಿಸಲು ಧಮಕಿ ನೀಡಲಾಗಿದೆ.

    ಪ್ರತ್ಯುತ್ತರಅಳಿಸಿ
  15. ಶ್..... ಅವರೆ,

    ಪಾ(ತ)ಕಿಗಳ ಕೃತ್ಯವನ್ನು ಅಷ್ಟು ಕೀಳಾಗಿ ಕಂಡ ಕಾರಣ ನಿಮ್ಮ ಮೇಲೆ ಅವರ ಕಣ್ಣು ಬಿದ್ದಿದೆಯಂತೆ. ಆದ್ರೆ ನಿಮಗೇನೂ ತೊಂದ್ರೆ ಇಲ್ಲ, 90-95 ಮೈಲಿ ವೇಗದಲ್ಲಿ ಕಾರು ಓಡಿಸ್ತೀರಲ್ವಾ? ಅವರು ಬಫೆಲೋ ಮೇಲೆ ಕುಳಿತು ಬರುವಾಗ ನೀವು ಕೈಗೆ ಸಿಗದಷ್ಟು ದೂರ ಹೋಗಿರುತ್ತೀರಿ.

    ಪ್ರತ್ಯುತ್ತರಅಳಿಸಿ
  16. ಕಾರ್ತಿಕ್ ಅವರೆ,
    ನಮ್ಮ ಬಗ್ಗೆ ನಿಮಗೇಕೆ ಸಂಶಯ ಅನ್ನೋದೇ ಅರ್ಥವಾಗ್ತಿಲ್ಲ....
    ನೀವೇ ಡಿಸ್ಕವರ್ ಮಾಡಿಬಿಡಿ. ಯಾಕಂದ್ರೆ ಅಮೆರಿಕದ ಡಿಸ್ಕವರರ್ ಕೊಲಂಬಸ್ ಕಾಲ ಕೆಳಗೇ ನಿಂತಿದ್ದೀರಲ್ವಾ?

    ಗೊಬ್ಬರ ತಿನ್ನಿಸೋರು ಇರೋ ತನ್ಕ ಬ್ರಿಟಿಷ್ ಸ್ತ್ರೀಯರು ಗೊಬ್ಬರ ತಿಂತಾನೇ ಇರ್ತಾರೆ. :)

    ಪ್ರತ್ಯುತ್ತರಅಳಿಸಿ
  17. ಅನಾಮಧೇಯಜುಲೈ 21, 2006 3:28 AM

    Looks nice! Awesome content. Good job guys.
    »

    ಪ್ರತ್ಯುತ್ತರಅಳಿಸಿ
  18. ಓ anonymous..
    ಬಂದಿದ್ದಕ್ಕೆ ಥ್ಯಾಂಕ್ಸ್.
    ಆದ್ರೆ ನಿಮ್ಮ ಬ್ಲಾಗು ಇದೆಯೇ?
    Good job guys ಅಂತ ಹೇಳಿದ್ದೀರಿ,
    ಅಂದ್ರೆ ನಮ್ಮ ಏಕಾಂಗಿ ಬ್ಯುರೋದ ಒಬ್ಬ guy ಮತ್ತು ಕಾಮೆಂಟ್ ಮಾಡುವ, ಓದುವ ಎಲ್ಲಾ guys ಅಂತ ಅರ್ಥವಿರಬಹುದೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D