ಅಚ್ಚರಿಯ ಹಿನ್ನೆಲೆಯೂ ಅಚ್ಚರಿಯಾಗಿದೆ. ಸಿಂಧ್ ಪ್ರಾಂತ್ಯದ ಶಾಸಕನೊಬ್ಬ ಸದನದಲ್ಲೇ ಶಾಸಕಿಗೆ ಪ್ರೇಮ ಪತ್ರ ಕೊಟ್ಟು ಸಿಕ್ಕಿಹಾಕಿಕೊಂಡಿದ್ದ ವರದಿ ಇಲ್ಲಿ ಪ್ರಕಟವಾಗಿತ್ತು. ಹಿನ್ನೆಲೆ ಶೋಧಿಸಿದಾಗ ಆತ ಹಿಂದು, ಆಕೆ ಮುಸ್ಲಿಂ. ಆದರೂ ಭಾರತದ ಅರಾಜಕಾರಣಿಗಳಂತೆ ಅಲ್ಲಿ ಯಾರೂ ಈ ವಿಷಯವನ್ನು ಕೋಮು ಸಂಘರ್ಷಕ್ಕೆ ತಿರುಗಿಸಿಲ್ಲವೇಕೆ ಎಂಬುದೇ ಬೊಗಳೆ ರಗಳೆ ಬ್ಯುರೋ ಅರಿವಿಗೆ ಬಾರದ ಅಸತ್ಯ. ಇಲ್ಲಿನವರು ರಾಜಕಾರಣಿಗಳಾಗಲು ನಾಲಾಯಕ್ಕು, ಅವರಿಗೆ ಭಾರತದಲ್ಲಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಹೊಸ ಯೋಚನೆಯೂ ಬಾರದಿರಲಿಲ್ಲ.
ಈಶ್ವರ ಅಂದರೆ ಕಾಮದಹನ ಮಾಡಿದವನಲ್ವೆ, ಆತ ಕೂಡ ಕೈಲಾಸದಲ್ಲೇ ಇರೋದಲ್ವೆ ಎಂಬ ಆತಂಕದಿಂದಲೇ ಅಲ್ಲಿಗೆ ಹೋದಾಗ ತಿಳಿದು ಬಂದಿದ್ದು, ಇದು ನೀಲವರ್ಣದ, ಪಾರ್ವತಿಪತಿ ಶಿವನಲ್ಲ. ಇದು ಲಾಲ್ ಬಣ್ಣದ ಈಶ್ವರನ ಕಿತಾಪತಿ ಅಂತ. ಈ ಈಶ್ವರ ಲಾಲ್ ಹೋಗಿ ಹೋಗಿ ಮಾರಿಗೆ ಲವ್ ಲೆಟರ್ ಕೊಡೋದೇ?
ನಾರಿ ಮುನಿದರೆ ಮಾರಿ ಅಂತ ಕೇಳಿದ್ದೀರಿ, ಆದರೆ ನೇರವಾಗಿ ಮಾರಿಗೇ ನೀವು ಈ ಥರ ಲವ್ ಲೆಟರ್ ಕೊಟ್ಟಿದ್ದೇಕೆ ಎಂಬ ಅಸತ್ಯಾನ್ವೇಷಿಯ ಪ್ರಶ್ನೆಗೆ ಉತ್ತರಿಸಿದ ಈಶ್ವರ, ಏನಿಲ್ಲ, ನಾನು ಸುಮ್ಮನೆ ಮಾರಿ ಬಿಸ್ಕಿಟ್ ತಿನ್ತಾ ಇದ್ದೆ. ಅದರ ಪೊಟ್ಟಣ ಖಾಲಿಯಾದಾಗ ಗುಮಾಸ್ತನ ಕೈಲಿ ಅದನ್ನು ಕೊಟ್ಟೆ, ಆದ್ರೆ ಅದರಲ್ಲಿ ಮಾರಿ ಅಂತ ಮುದ್ರಿತ ಅಕ್ಷರಗಳಿದ್ದುದರಿಂದ ಆ ಗುಮಾಸ್ತ ಅದನ್ನು ಓದಿ ಶಾಜಿ ಮಾರಿಗೆ ಕೊಟ್ಟೇಬಿಟ್ಟ ಎಂದು ಸಮರ್ಥಿಸಿಕೊಂಡ!
6 ಕಾಮೆಂಟ್‌ಗಳು
ಹಿಂದು ಮುಸ್ಲಿಂ ಹುಡುಗ ಹುಡುಗಿಯಲ್ಲಿ ವೈಮನಸ್ಯ ಬರೋಕ್ಕೆ ಛಾನ್ಸೇ ಇಲ್ಲ. ಯಾಕೆಂದರೆ (ನಮ್ಮ ಬೀರುವಿನ ಸಂಶೋಧನೆ) ಪ್ರೀತಿಸುತ್ತಿದ್ದಂತೆಯೇ ಅವರಿಬ್ಬರೂ ಕುರಿಸ್ತಾನರಾಗುವರು (ಗಂಡು ಕುರಿಯಾದರೆ ಹೆಣ್ಣು ಕುರುಬಿ). ಇದರ ಹಿಂದೆ ಅಮೆರಿಕೆಯ ಶುಬ್ಬಣ್ಣನ ಕಿತಾಪತಿ ಇದೆ ಎಂಬುದೂ ತಿಳಿದುಬಂದಿದೆ. ಕಾಪಿಗಳು ಡಾಲೆನ್ ಜೊತೆ ಸೇರುತ್ತಿದ್ದಾರೆ ಎಂದು ಈ ತಂತ್ರ ಉಪಯೋಗಿಸುತ್ತಿದ್ದಾರೆ. ಇನ್ನೂ ಹಲವು ಜೋಡಿಗಳು ಹೀಗೆಯೇ ಮದುವೆ ಆಗುವರೆಂದೂ ತಿಳಿದುಬಂದಿದೆ.
ಪ್ರತ್ಯುತ್ತರಅಳಿಸಿ೪,೦೦೦ ನೆಟ್ಟೊದೆತಗಳಾದ್ರೂ ಇನ್ನೂ ನಿಲ್ಲೋಕೆ ಶಕ್ತಿ ಇದೆ ಅಂದ್ರೆ ನಿಮ್ಮನ್ನು ಪ್ರಶಂಸಿಸಲೇಬೇಕು. ಇದಕ್ಕೆ ನೀವು ದಿನ ಏನು ತೆಗೆದುಕೊಳ್ತಿದ್ದೀರಿ (ಹೊಟ್ಟೆಗೆ ಸ್ವಾಮಿ ಇನ್ನೆಲ್ಲಿಗೂ ಅಲ್ಲ).
ಮಹತ್ವದ ಸುದ್ದಿ ಬಿತ್ತರಿಸಿದುದ್ದಕ್ಕೆ ನನ್ನಿಂದೊಂದು ಒದೆ (ಕ್ಷಮಿಸಿ ವಡೆ).
ಪ್ರೇಮಪತ್ರಾನ್ವೇಶಿಗಳು, ಪಕಸ್ತಾನಕ್ಕೆ ತೆರಳಿ, ಸುದ್ದಿ ತಂದದಕ್ಕೆ ವಂದನೆಗಳು. ಕೆಂಪಣ್ಣ, ಮಾರಿಗೆ ಸಾರಿ(ಬಹಿರಂಗವಾಗಿ) ಕೇಳಿದ್ದರೆ , ಸಾಕೀ ವಸ್ತ್ರಾಂತ್ ಥರಹ ಕ್ಷಮಿಸುತ್ತಿದಳೊ ಏನೊ?
ಪ್ರತ್ಯುತ್ತರಅಳಿಸಿ೪೦೦೦ ನೆಟ್ಟೊಡೆತಕ್ಕೆ ಅಭಿನಂದನೆಗಳು.
ಮಾವಿನರಸರೆ,
ಪ್ರತ್ಯುತ್ತರಅಳಿಸಿಇಷ್ಟೊದೆತ ತಿಂದೂ ನೆಟ್ಟಗಿರುವುದಕ್ಕೆ ನೆಟ್ಟೋದುಗರು ಬಿಟ್ಟೋಡಿದ ಅಭಿಮಾನದ ಕೇಕ್ ತೆಗೆದುಕೊಳ್ಳುತ್ತೇವೆ.
ನಿಮ್ಮ ಬೀರುವಿನಲ್ಲಿರುವ sum ಮಾತ್ರ ಕಳಿಸಿಕೊಡಿ. ಶೋಧನೆ ಮತ್ತೆ ನೋಡಿಕೊಳ್ಳೋಣ.
ಲೀಫಾಕ್ ಮಾನಸಪುತ್ರರೇ,
ಪ್ರತ್ಯುತ್ತರಅಳಿಸಿನಳಪಾಕಸ್ತಾನದಲ್ಲಿ ನಳ ಮಾತ್ರ ಸಿಗುತ್ತಾರೆ, ದಮಯಂತಿ ಇಲ್ಲವಂತೆ.
ನಿಮ್ಮ ನೆಟ್ಟೊದೆತ ದಿಂದ ನೆಟ್ ಒಡೆಯದಿದ್ದರೆ ಸಾಕು !
ಧನ್ಯವಾದ.
ನಾರಿ ಮುನಿದರೆ ಮಾರಿ ಆಗ್ತಾಳೆ...
ಪ್ರತ್ಯುತ್ತರಅಳಿಸಿಈಕೆ ಮೊದಲೇ ಮಾರಿ, ಹೀಗೆ ಈಶ್ವರನ ಮೇಲೆ ಮುನಿದರೆ ಅವಳನ್ನೇನನ್ನಬೇಕು? ಹೆಮ್ಮಾರಿ? ಮಾರಿ++?
ಅಂದಹಾಗೆ, ಉಪ್ಪಿಗೆ (ಉಪೇಂದ್ರನಿಗೆ) ಈ ಸುದ್ದಿ ತುಂಬಾ ವರ್ಷಗಳ ಹಿಂದೆಯೇ ಸಿಕ್ಕಿತ್ತು ಅನ್ನಿಸ್ತದೆ. ಇಲ್ಲಾಂದ್ರೆ "ಮಾರಿ ಕಣ್ಣು ಹೋರಿ ಮ್ಯಾಗೆ..." ಎಂದು ಯಾಕೆ ಅರಚುತ್ತಿದ್ದ? ಈ ಮಾರಿ ಈಶ್ವರನನ್ನು ಲವ್ವಿಸುತ್ತಿಲ್ಲ, ಅವಳ ಕಣ್ಣು ಹಾಕಿರೋದು ಹೋರಿ ಮ್ಯಾಲೆ ಅಂತ ತಾನೆ?
ಜೋಶಿ ಅವರೆ,
ಪ್ರತ್ಯುತ್ತರಅಳಿಸಿನಾರಿ ಮುನಿದರೆ ಏನನ್ನು ಮಾರಿ? ಎಷ್ಟನ್ನು ಮಾರಿ ?ಅನ್ನೋದು ಅರ್ಥವಾಗದ ಸಂಗತಿ.
ಆದ್ರೆ ಉಪ್ಪಿನ ಕೇಸಿನಲ್ಲಿ, ಮಾರಿ ಯಾರು, ಹೋರಿ ಯಾರು ಎಂಬುದು ಯೋಚನೆಗೆ grass ಒದಗಿಸಿದೆ. ಉಪ್ಪೇ ಹೋರಿಯೋ, ಅಥವಾ ಆತನ ಅರ್ಧ-ಅಂಗಿ ಬೆಂಗಾಳಿನಿಯ ಕಣ್ಣು ಉಪ್ಪಿನ ಮೇಲೆ ಬಿದ್ದದ್ದೋ ತಿಳಿದಿಲ್ಲ.
ಏನಾದ್ರೂ ಹೇಳ್ರಪಾ :-D