ಗಾಯಕ ಮಿಕಾನನ್ನು ಪಬ್ಲಿಸಿಟಿಗೋಸ್ಕರ ಆಕೆ ಮಿಕ ಮಾಡಿಕೊಂಡು ಇದೀಗ ಇಡೀ ರಾಷ್ಟ್ರವೇ ಆಕೆಯನ್ನು ಮಿಕಮಿಕಾಂತ ನೋಡಿ ಭರ್ಜರಿ ಪಬ್-ಲಿಸಿಟಿ ಪಡೆದ ಅಂಶ ಕನಿಷ್ಠ ಉಡುಗೆಯ ಮಧ್ಯೆ ಹೊರಬಿದ್ದಿದೆ.
ಮಿಕ ನನಗೆ ಮಿಕಮಿಕಾಂತ ಕಿಸ್ ಕೊಟ್ಟಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಕೊಟ್ಟಿದ್ದ. ಆದ್ರೆ ಆಗ ಕ್ಷಮಿಸಿದ್ದೆ, ಆಗ ನನ್ನ ಫ್ರೆಂಡ್ ಆಗಿದ್ದನಾತ ಎಂದೆಲ್ಲಾ ತೊದಲಿದ ಸಾಕೀ ವಸ್ತ್ರಾಂತ್, ಈ ಬಾರಿ ಮಾತ್ರ ಯಾಕೆ ಪೊಲೀಸ್ ಕೇಸ್ ಹಾಕಿದ್ದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಇತ್ತೀಚೆಗೆ ನಾನು ಎಷ್ಟೇ ಕಡಿಮೆ ಬಟ್ಟೆ ತೊಟ್ಟರೂ ಪ್ರಚಾರವೂ ಕಡಿಮೆಯಾಗುತ್ತಿದೆ ಎಂದು ವಾರೆನೋಟ ಬೀರಿದ್ದಾಳೆ.
ಆದ್ರೆ ಆತ ನನಗೆ ಗೊತ್ತಿಲ್ಲದೆಯೇ ಕಿಸ್ ಕೊಟ್ಟಿದ್ದು, ನನಗೆ ಆಘಾತ ನೀಡಿತ್ತು.
ಪೊಲೀಸರಿಗೆ ದೂರು ನೀಡಲು ತಡವೇಕಾಯಿತು ಎಂದು ಕೇಳಿದಾಗ, ಘಟನೆ ನಡೆದ ಬಳಿಕ ನನಗೆ ಸ್ವಲ್ಪ ಅಳಲು ಸಮಯ ಬೇಕಿತ್ತು. (ಕಣ್ಣು ಕೆಂಪಗಾಗಬೇಡವೆ?) ಅದಕ್ಕಿಂತಲೂ ಹೆಚ್ಚಾಗಿ, ಬೆನ್ನೆಲುಬಿಲ್ಲದವರು ತೊಡುವ ಬೆನ್ನಿಲ್ಲದ ಉಡುಗೆ ಮಾತ್ರ ಇದ್ದ ಕಾರಣ ಬಟ್ಟೆ ತೊಟ್ಟುಕೊಳ್ಳಬೇಕಿತ್ತು. ಅದಕ್ಕೆ ಸ್ವಲ್ಪ ತಡವಾಯಿತು ಎಂದಾಕೆ ತಡಬಡಿಸಿದ್ದಾಳೆ.
ಮಿಕಾ ವಿರುದ್ಧ ಕೇಸ್ ಹಾಕಲು ಏನು ಪ್ರೇರಣೆ ಎಂದು ಕೇಳಿದಾಗ, ನಿಮ್ಮ ಬೊಗಳೆ ರಗಳೆ ಬ್ಯುರೋದ ಈ ವರದಿ ಕಾರಣ ಅಂತಲೂ ಆಕೆ ಹೇಳಿದಳು.
ಮಿಕಾ ಬಹಿರಂಗವಾಗಿ ಕ್ಷಮೆ ಕೇಳಿದ್ರೆ ನನ್ನ ತುಂಡುಡುಗೆ ಬಿಚ್ಚಿ ಹಾಕಿದಷ್ಟೇ ಸಲೀಸಾಗಿ ಕೇಸ್ ವಾಪಸ್ ತಗೋತೀನಿ ಅಂತ ಆಕೆ ನುಡಿದಿದ್ದಾಳೆ.
ಇತ್ತ, ಪೊಲೀಸರ ಹದ್ದಿನ ಕಣ್ಣಿಗೆ ಗುರಿಯಾದ ಮಿಕ ಮಿಕಾನನ್ನು ಪ್ರಶ್ನಿಸಿದಾಗ, ನಾನೇನೂ ಕಚಕ್ಕನೆ ಆಕೆಯ ತುಟಿ ಕಚ್ಚಲಿಲ್ಲ. ಆಕೆ ಬರ್ತ್‌ಡೇ ಶುಭಾಶಯದೊಂದಿಗೆ ಕಿಸ್ ಕೊಟ್ಟಾಗ ನಾನು ಸ್ವಲ್ಪ ಲೊಚಗುಟ್ಟಿದೆನಷ್ಟೆ ಎಂದು ಸ್ಪಷ್ಟಪಡಿಸಿದ್ದಾನೆ.ಅದಲ್ಲದೆ ಈ ಘಟನೆ ನಡೆದ ಹೋಟೆಲ್ ಹೆಸರು "Someone Else" ಆಗಿರುವುದರಿಂದ ಇಲ್ಲಿ ಯಾರು ಮುತ್ತು ಕೊಟ್ಟರೂ ಅದು "someone else" ಅಂತ ಹೇಳಿ ಸುಮ್ಮನಾಗಬಹುದಲ್ವಾ ಎಂದೂ ಆತ ಪ್ರಶ್ನಿಸಿದ್ದಾನೆ.
4 ಕಾಮೆಂಟ್‌ಗಳು
ಈ ಮಿಕ ಮತ್ತು ಸಾಕಿಯರನ್ನು ಅಪ್ರಬುದ್ಧ ಅಮಾಯಕರು ಎಂದಷ್ಟೇ ಹೇಳಬಹುದು. ಯಾವುದನ್ನು ಎಲ್ಲಿ ಮಾಡಬೇಕು, ಯಾರ ಮುಂದೆ ಹೇಳಿಕೊಳ್ಳಬೇಕು ಎನ್ನುವುದು ಸ್ವಲ್ಪವೂ ಗೊತ್ತಿಲ್ಲದವರು.
ಪ್ರತ್ಯುತ್ತರಅಳಿಸಿಅಲ್ಲ, ಹೋಗಿ ಹೋಗಿ ಬೊಗಳೆ ಪಂಡಿತರ ಕೈಗೆ ಸಿಕ್ಕಿಕೊಳ್ಳೋದಾ? ಯಾವುದೋ ಮೂಲೆ ಹೋಟೆಲ್‍ನಲ್ಲಿ ನಡೆದ ಘಟನೆ ಯಾರಿಗೂ ತಿಳಿದಿರಲಿಲ್ಲ. ಪಂಡಿತರ ಜಾಲರಿಯ ಜಾಲದ ಮೂಲಕ ಈಗ ಜಗಜ್ಜಾಹೀರಾಗುತ್ತಿದೆ. ಎಂತಹ ಅವಮಾನ.
ನನಗೇನಾಗಿದ್ದರೂ ಹೀಗೆ ಆಗಿದ್ದಿದ್ದರೆ, ಒಂದು ಬಕೆಟ್ಟಿನಲ್ಲಿ ನೀರು ತುಂಬಿ ಅದರಲ್ಲಿ ಬಿದ್ದು ಅಥವಾ ತುಂಬೆಗಿಡಕ್ಕೆ ನೇತುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ.
ಈ ವಿಷ್ಯ ಮುಂಬಯಿಯಲ್ಲೇ ನಡೆದಿರೋದ್ರಿಂದ ನೀವು ಕೂಡ ಮಿಕಕ್ಕೆ ಆಶ್ರಯ ಕೊಟ್ಟಿದ್ದೀರಿ ಅಂತ ನಿಮ್ಮ ಮೇಲೆ ನಿಗಾ ಇಟ್ಟಿದ್ದಾರೆ.
ಪ್ರತ್ಯುತ್ತರಅಳಿಸಿನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳೋದಿಕ್ಕೆ ನಮ್ಮಲ್ಲಿ ಒಂದು ಒಡೆದ ಲೋಟ ಇದೆ!
ಅಕಟಕಟಾ....
ಪ್ರತ್ಯುತ್ತರಅಳಿಸಿವಸ್ತ್ರಾಂತ್ ಅವರ ಕಿಸ್ಸಾಪಹರಣವಾಗಿದ್ದಕ್ಕೇ ಇಷ್ಟು ದೊಡ್ಡ ಸುದ್ದಿ ಪ್ರಕಟಿಸಿರುವ ನೀವು, ಅವರ ವಸ್ತ್ರಾಪಹರಣವೇನಾದರೂ ಆಗಿದ್ದರೆ ಇನ್ನೆಷ್ಟು ದೊಡ್ಡ ಸುದ್ದಿ ಪ್ರಕಟಿಸುತ್ತಿದ್ದಿರೋ...
ಸಾಕೀ ವಸ್ತ್ರಾಂತ ಬಾಯಿ ಬಡಕೊಳ್ಳುತ್ತಿರುವವಳ ವಸ್ತ್ರಾಪಹರಣ ಯಾರಾದರೂ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ ವಿಶ್ವನಾಥ್, ಆಕೆ ಯಾವತ್ತೂ ಆ ಕಾರ್ಯದಲ್ಲೇ ಮಗ್ನಳಾಗಿರುತ್ತಾಳಲ್ಲ!
ಪ್ರತ್ಯುತ್ತರಅಳಿಸಿತಪ್ಪಾಗಿ ತಿಳಿದುಕೊಳ್ಳದಿರಿ ಅಂತ ಬೋಲ್ಡ್ ಮಾಡಲಾಗಿದೆ.
ಏನಾದ್ರೂ ಹೇಳ್ರಪಾ :-D