ಬೊಗಳೆ ರಗಳೆ

header ads

ಬಾರ್-ಕಿಂಗ್ ನ್ಯೂಸ್....!!!

(ಬೊಗಳೂರು ಪರದೇಸಿ ಬ್ಯುರೋದಿಂದ)
ಬೊಗಳೂರು, ಮೇ 19- ಮನಮೋಹಕ್ ಸಿಂಗ್ ಹಾಗೂ ಲಾರ್ಜ್ ಬುಶ್ ಅವರು ಬಾರ್ ಒಂದರಲ್ಲಿ ಹೀರ್‌ತ್ತಿದ್ದಾಗ ದೂರದಲ್ಲಿ ಅವರನ್ನು ಕಂಡ ಅಸತ್ಯಾನ್ವೇಷಿ, ಪಕ್ಕದ ಬಾರ್ ಅಸೋಸಿಯೇಶನ್ ಮತ್ತು ಬಾರ್ ಓನರ್ಸ್ ಅಸೋಸಿಯೇಶನ್ ಎರಡಕ್ಕೂ ಫೋನ್ ಮಾಡಿ ಖಚಿತಪಡಿಸಿಕೊಂಡ.

ಹೌದು, ಅವರು ಭಾರತದ ನಿಧಾನಿ ಮತ್ತು ಅಮೆರಿಕದ "ಉಗ್ರಾ'ಣಿ ಎಂಬುದು ದೃಢಪಟ್ಟಿತು.
ಹಲೋ.... ಇಲ್ಲೇನು ಮಾಡುತ್ತಿದ್ದೀರಿ....? ಎಂದು ಸಂದರ್ಶನ ಆರಂಭಿಸಿದ ಅಸತ್ಯಾನ್ವೇಷಿಗೆ ದೊರೆತ ಉತ್ತರದಿಂದ ಎದೆ ಧಸಕ್ಕೆಂದಿತು.

"ನಾವಿಲ್ಲಿ 3ನೇ ಮಹಾಯುದ್ಧದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ" ಎಂದು ಬುಷ್ಷನೆ ನುಡಿದಾಗ, ಕೆಳಗೆ ಬಿದ್ದ ಅಸತ್ಯಾನ್ವೇಷಿಗೆ ಮೂರು ಗ್ಲಾಸ್ ನೀರು ನೀಡಿ ಎಚ್ಚರಿಸಲಾಯಿತು.

ಸಾವರಿಸಿಕೊಂಡ ಅನ್ವೇಷಿ, "ಹೌದೇ? ನಿಜವೇ? 3ನೇ ಮಹಾಯುದ್ಧದಲ್ಲಿ ಏನಾಗುತ್ತದೆ?" ಎಂದು ಪ್ರಶ್ನಿಸಲಾರಂಭಿಸಿದಾಗ ಮನಮೋಹಕ ನಗೆ ಬೀರಿದ ಸಿಂಗ್, ನಾವು 14 ದಶಲಕ್ಷದಷ್ಟಿರುವ ಇರಾನೀಯರು ಮತ್ತು ಒಬ್ಬ ಬೊಗಳೆ ಪಂಡಿತನನ್ನು ನಾಶಪಡಿಸಲಿದ್ದೇವೆ ಎಂದುತ್ತರಿಸಿದರು.

"ಆಂ... ಬೊಗಳೆ ಪಂಡಿತನನ್ನೇ?!" ಎಂದು ಬಾಯಿಬಿಟ್ಟ ಅಸತ್ಯಾನ್ವೇಷಿ, ಬಿಟ್ಟ ಬಾಯಿಯನ್ನು ಇದುವರೆಗೂ ತೆರೆದಿಲ್ಲ.
ಅಲ್ಲಿಗೆ ಬುಷ್ ಅವರು ಸಿಂಗ್‌ರತ್ತ ತಿರುಗಿ.... "ನಾನು ಹೇಳಿಲ್ವೇ? 14 ಮಿಲಿಯ ಇರಾನ್ ಜನತೆಯ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳೋದಿಲ್ಲ. ಇನ್ನು ನಮಗೆ ಯಾರದೇ ಚಿಂತೆ ಇಲ್ಲ, ದಾಳಿ ಮುಂದುವರಿಸಬಹುದು."

ಅಲ್ಲಿಗೆ ಇರಾನ್ ಮೇಲಿನ ಯುದ್ಧ ಸುದ್ಧಿ ಸ್ಫೋಟಿಸುವ ವಿಷಯ ಮೊದಲಾಗಿ ಬೊಗಳೆ-ರಗಳೆಗೆ ದೊರೆಯಿತು.
 
NB: This Ex-jucive report has been poste somewhere near the indo-American border area with very "remote" control.! :)

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಓಹ್! ಪಂಡಿತರು ಅಷ್ಟು ಶಕ್ತಿಶಾಲಿಗಳು ಎಂಬುದು ನನಗೆ ತಿಳಿದಿರಲೇ ಇಲ್ಲ. ೧೪ ಲಕ್ಷ ಮಿಲಿಯ (ಲೀಟರ್ರಾ) ಇರಾನಿಯರಿಗೆ ಸಮಾನ ಒಬ್ಬ ಬೊಗಳುವ ಪಂಡಿತರು (ಕ್ಷಮಿಸಿ ಬೊಗಳೆ ಪುಂಡರು- ಅಲ್ಲಲ್ಲ ಪಂಡಿತರು). ಇಂತಹ ಪಂಡಿತರೂ ಇನ್ನೂ ಬಹಳಿಷ್ಟಿದ್ದಾರೆ ಎಂದು ಸಿಂಗಣ್ಣನಿಗೆ ಗೊತ್ತಿದೆ ಅಲ್ವೇ! ಅದನ್ನು ಬುಷ್ ಕೋಟಿನವನಿಗೆ ತಿಳಿಸಿದರೆ ಸಾಕು.
    ಈ ಪಂಡಿತರು ಡರ್ರಂ ಬುರ್ರಂ ನಲ್ಲಿ ಹೆಸರುವಾಸಿಯಂತೆ. ಎಷ್ಟೇ ಆಗಲಿ ಚಾಣಕ್ಯನ ವಂಶಸ್ಥರಲ್ಲವೇ?

    ಈ ವರದಿಯನ್ನು ಬೌಬೌಸಿ ಯವರಿಗೆ ತಿಳಿಸಿ. ನಮ್ಮ ದೇಶದ ಮೇಲೆ ಯಾರೂ ಯುದ್ಧ ಮಾಡಲು ಬರಲಾರರು.

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳೆ,

    ಇರಾನ್ ತಾನೆ ಹೋದ್ರೆ ಹೋಗ್‌ಲಿ ಬಿಡಿ, ನಮ್ ಬೊಗಳೆ ಸವಕಾರ್ರನ್ನು ಮುಟ್ಟದಿದ್ದರೆ ಸಾಕು, ಬೇಕಾದ್ರೆ ಹೇಳಿ ನಿಮ್ಮ ಅಡ್ರಸ್ ಕೊಟ್ಟು ಬುಷ್‌ಗೆ ಪ್ರತ್ರ ಬರೀತೀನಿ, ಲಾಕ್ ಹೀಡ್ ಮಾರ್ಟಿನ್‌ನಲ್ಲಿ ಮಾಡಿರೋ ಅವರ ಬಾಂಬರುಗಳು ಪ್ರಿಸಿಷನ್ ಟೆಕ್ನಾಲಜಿ ಉಪಯೋಗಿಸಿದರೂ ಹಲವು ಮೀಟರುಗಳ ಅಂತರದಲ್ಲಿ ಅನ್ವೇಷಿಗಳನ್ನು ಮಿಸ್ ಮಾಡೋದು ಗ್ಯಾರಂಟಿ!

    ಅಂದ ಹಾಗೆ ಸೂಟ್‌ಕೇಸು ಹೊತ್ಕೊಂಡು, ಊರ್ ಬಣ್ಣ ಉಟ್ಕೊಂಡು, ಲಾಲೂ ಟ್ರೇನನ್ನ ಹೊಡ್ಕೊಂಡು ಬರೋದರ ಜೊತೆಗೆ ಮತ್ತೇನನ್ನು ತಂದಿರಿ?

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಮೇ 22, 2006 4:03 PM

    ಬೊಗಳೆ ಪಂಡಿತ ತನ್ನ ಡೈರಿಯಲ್ಲಿ ಅಂಗ್ರೇಜಿಯಲ್ಲೇ ಗೀಚಿಕೊಂಡ:

    "Bush declared
    war on Iran. I ran "!

    ಪ್ರತ್ಯುತ್ತರಅಳಿಸಿ
  4. ಅನಾಮಧೇಯಮೇ 23, 2006 2:28 PM

    Hey earlybird! thanks for dropping by:)
    haraTekaTTe has jus become active. do check our first post. thanku again:)

    ಪ್ರತ್ಯುತ್ತರಅಳಿಸಿ
  5. ಹೌದು ಅಂತರಂಗಿಗಳೆ,
    ನಾನಿಷ್ಟು ದಿನ ಅನಿವಾರ್ಯವಾಗಿ ತಲೆಮರೆಸಿಕೊಳ್ಳಲು ಕಾರಣಗಳು ಸಾಕಷ್ಟಿವೆ.
    ಬುಷ್ ಇಂಟರ್ವ್ಯೂ ಮಾಡಲು ಹೋದಾಗ ಸಿಕ್ಕಿಬಿದ್ದೆ, ಅದ್ಯಾವುದೋ ರಿಮೋಟ್ ವಿಲೇಜ್‌ನಲ್ಲಿ. ಅಲ್ಲಿ ಜಿಗಣೆಗಳ, ಸೊಳ್ಳೆಗಳ ಕಾಟ. ಆಮೇಲೆ ವಾತಾವರಣವೂ ಬದಲಾಯಿತಲ್ಲವೇ?
    ಬುಷ್‌ನ ಬಾಂಬರ್‌ಗಳು ಮಾಡಿದ ದಾಳಿಯಿಂದ ತಪ್ಪಿಸಿಕೊಂಡೆನಾದರೂ, ಆತನ ವೈರಲ್ ಅಟ್ಯಾಕ್‌ನಿಂದ ಬಚಾವಾಗಲಿಲ್ಲ. ಮರಳಿ ಬಂದವನೇ ಧೊಪ್ಪನೆ ಹಾಸಿಗೆ ಮೇಲೆ ಬಿದ್ದೆ.
    ಅಂತೂ ನೀವು ಬುಷ್‌ಗೆ ಬರೆದ ಪತ್ರ ಕೆಲಸ ಮಾಡ್ತು. ಪ್ರಿಸಿಶನ್ ಬಾಂಬರ್‌ಗೆ ನನ್ನನ್ನು ಮುಟ್ಟಲಾಗಲಿಲ್ಲ.

    ಅಂದಹಾಗೆ, ನಾನು ಸೂಟ್ ಕೇಸ್ ಹೊತ್ಕೊಂಡಿದ್ದನ್ನು ನೀವೆಲ್ಲಿ ಕಂಡಿರಿ? ಆ ಲಾಲು ಟ್ರೇನಲ್ಲಿ ಮಣ್ಣಿನ ಮಡಕೆಯ ಚಹಾ ಕುಡಿದು ವೈರಲ್ ಫಿವರ್ ಮಾತ್ರ ಸಾಕಷ್ಟು ತಗಂಡು ಬಂದಿದ್ದೆ ಅಂತೀನಿ....!!

    ಪ್ರತ್ಯುತ್ತರಅಳಿಸಿ
  6. ಓಹ್ ಮಾವಿನಯನಸ ಅವರೆ,
    ನಿಮ್ಮ ಬಗ್ಗೆಯೂ ಬುಷ್ ಎದುರು ಗುಸ್ ಗುಟ್ಟಿದಾಗ, ಆತ ಕೂಡ ಭುಸ್ ಎನ್ನಬೇಕೆ? ನೀವಾದ್ರೂ ಏನು ಮಾಡಿದ್ದೀರಿ ಆತನಿಗೆ? ನಿಜ ಹೇಳಿ, ಇಲ್ಲವಾದರೆ ತಲೆ ಸಾವಿರ ಹೋಳಾದೀತು. (ಯಾರದ್ದು ಗೊತ್ತಿಲ್ಲ!)

    ಪ್ರತ್ಯುತ್ತರಅಳಿಸಿ
  7. ಜೋಷಿಯವರೆ,
    ಬೊಗಳೆ ಪಂಡಿತರ ಡೈರಿ ಸಿಕ್ಕಿದೆ ಅಂತ ಬಹಿರಂಗಪಡಿಸಿ ಏನೋ ಅನುಮಾನ ಸುಳಿದಾಡುವಂತೆ ಮಾಡಿದ್ದೀರಲ್ಲ? ಡೈರಿ ಸಿಕ್ಕಿದೆ ಅಂತ ಹೇಳಿಕೊಳ್ಳಿ ಬಿಡಿ. ಆದ್ರೆ, ಅದರಲ್ಲಿ ''I ran'' ಅನ್ನೋ ಪದವನ್ನು ಡಿಲೀಟ್ ಮಾಡಿ ಪ್ರಕಟಿಸಬಹುದಿತ್ತಲ್ಲ...!!?

    ಪ್ರತ್ಯುತ್ತರಅಳಿಸಿ
  8. ಓ... ಹೊಸ ಹರಟೆ ಕಟ್ಟೆ ಕಟ್ಟಲಾಗಿದೆ.
    ಇನ್ನು ಎಷ್ಟು ಬೇಕಾದ್ರೂ ಹರಟೆ ಕೊಚ್ಚಿಕೊಳ್ಳಬಹುದು, ಕಾಲಹರಣ ಮಾಡ್ಬಹುದು!

    ಪ್ರತ್ಯುತ್ತರಅಳಿಸಿ
  9. ಬೊಗಳೆ ಪಂಡಿತರೇ,

    ನಿಮ್ಮ ವರದಿ ಬರೀ ಬೊಗಳೆ ತಾನೇ? ಇಲ್ಲಾ ನಿಜ ಆಗಿದ್ದರೆ ನನಗೆ ರಗಳೆ, ಯಾಕೆಂದರೆ ನಾನೀಗ ಇರೋದು Iranನಲ್ಲಿ, ಜೋಶಿಯವರು ಹೇಳಿದ ಹಾಗೆ ನಾನೂ Iranನಿಂದ 'I ran' ಮಾಡಬೇಕಾಗಬಹುದು.

    - ಇ-ರಾಣಿ

    ಪ್ರತ್ಯುತ್ತರಅಳಿಸಿ
  10. ಶ್ರೀಲತಾ ಅವರೆ,
    ಬ್ಲಾಗ್ ಗೆ ಇಣುಕಿದ್ದಕ್ಕೆ ಧನ್ಯವಾದ.

    ನೀವು ಮಾನಸ್ಇರಾನಿ ಆಗಿದ್ದು ಯಾವಾಗ? ಬುಷ್ ಗೆ ಮತ್ತು ಸಿಂಗ್ ಗೆ ಚಾಡಿ ಹೇಳಲಾಗುತ್ತದೆ... :)

    ಪ್ರತ್ಯುತ್ತರಅಳಿಸಿ
  11. ನೀವು ಚಾಡಿ ಹೇಳೋದು ಹಾಗಿರಲಿ, ನೀವ್ಯಾಕೆ ನನಗೆ ಅಸತ್ಯ ಬ್ಯೂರೋದ Resident Correspondent in Iran ಆಗಿ ಕೆಲಸ ಕೊಡಬಾರದು?

    ನನ್ನ ಅ(ನ)ರ್ಹತೆಗಳು:
    1. ನಿಮ್ಮಷ್ಟು ಅಲ್ಲದಿದ್ರೂ ಸುಮಾರಾಗಿ ಬೊಗಳೆ ಬಿಡುವುದು
    2. ನಿಮ್ಮ ಹಾಗೇ silly little thingಗಳನ್ನೆಲ್ಲ ದೊಡ್ಡ ವಿಷಯ ಮಾಡುವುದು
    3. ತಾಂತ್ರಿಕ ಬರಹಗಾರ್ತಿ ಅಂತ officeನವ್ರು ಕೊಟ್ಟಿರುವ ಬಿರುದು (Technical Writer ಅನ್ನುವ designation ಸ್ವಾಮೀ, 'ಅಂತರಂಗಿ'ಗಳು ನೋಡಿದ್ರೆ ಭೇಷ್ ಅಂತಾರೆ, ಇಲ್ಲ ಅವರೂ ಬೊಗಳೆ(ಬ್ಲಾಗ್ ಗೆ ಇದೇ 'ತಾರಿ'ಗಿಂತ ಸರಿಯಾದ ಪದ ನನ್ನನ್ನು ಕೇಳಿದ್ರೆ) ಬಿಡುವುದರಲ್ಲಿ 'ವ್ಯಸ್ತ'ರಾಗಿದ್ದಾರೋ..

    ಇಷ್ಟೂ ಸಾಲದು ಅಂತ ನೀವು No Vacancy ಬೋರ್ಡ್ ಹಾಕ್ಕೊಂಡ್ರೆ ಇಲ್ಲಿ ಹೊಸದಾಗಿ ತಯಾರಾಗಿರುವ Nuke weapon ಅನ್ನು ನಿಮ್ಮ ಅಸತ್ಯ ಬ್ಯೂರೋದ ಕಡೆಗೆ ನೂಕುವಂತೆ ಅಹ್ಮದಿಯಣ್ಣ ಕೊಟ್ಟಿರೋ ಆರ್ಡರ್ ಕಾಪಿ ಕೂಡ ಇದೆ. ಇನ್ನೊಂದು ಗುಟ್ಟಿನ ಮಾತು: ಅಹ್ಮದಿಯಣ್ಣನ ಹತ್ರ ಇರೋದು ಬುಸ್ಸಪ್ಪನ ಗುಜರಿ ಗ್ಯಾರೇಜಿಂದ ಬೇಡಿ ತಂದಿರೋ ತುಕ್ಕು ಹಿಡಿದಿರುವಂತವಲ್ಲ, precision technology precise ಆಗೇ ಕೆಲ್ಸ ಮಾಡುತ್ತೆ!

    So appointment order ಈ ವಿಳಾಸಕ್ಕೆ ಕಳಿಸಿ (ಮೊದಲ ತಿಂಗಳ salary, TD, DA, etc etc ಜೊತೆಗೆ):

    I-RaNi
    ಖಾಮೇನಿ ಮನೆ ಪಕ್ಕ (ಅಹ್ಮದಿಯಣ್ಣನ ಮನೆ ಆಚೆ)
    ಟೆಹರಾಣು (rhyming with ಪರಮಾಣು)

    ಪ್ರತ್ಯುತ್ತರಅಳಿಸಿ
  12. ಖಂಡಿತ, ನಿಮಗೆ ಅಸತ್ಯ ಬ್ಯುರೋದ Residence respondent (ಏನೂ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುವ) ಹುದ್ದೆ ನೀಡಲಾಗಿದೆ.
    1. ತಾಂತ್ರಿಕ ಬರಹದಲ್ಲಿ ಅನುಭವವಿರುವುದರಿಂದ ನಿಮ್ಮನ್ನು ನಮ್ಮ ಮಾಂತ್ರಿಕ ಬರಹಗಾರ್ತಿಯನ್ನಾಗಿ ನೇಮಿಸಲಾಗಿದೆ.
    2. ಮೊದಲ ತಿಂಗಳ ವರ'ಮಾನ' ರೂಪದಲ್ಲಿ ಒಂದು ಪೈಸೆಯನ್ನು ಈಗಾಗಲೇ ಮನಿ ಆರ್ಡರ್ ಮಾಡಲಾಗಿದೆ.
    3. ಪ್ರತಿ ತಿಂಗಳು ಮಾನ ಹೆಚ್ಚಿಸಲಾಗುವುದು. ಗರಿಷ್ಠ ಮಿತಿ 420.
    4. ಸಾಲರಿ ಸಾಲದೂರೀ ಅನ್ನಬಾರದು.
    5. TA ಮತ್ತು DAಯನ್ನು TADA ಕೋರ್ಟಿಂದ ತೆಗೆದುಕೊಳ್ಳಿ.

    ನಿಮ್ಮ ವಿಳಾಸಕ್ಕೆ ಪತ್ರ ಕಳುಹಿಸಲಾಗಿದೆ. ಅದು ಅಹ್ಮದೀನೇಜಾದ್‌ನ ಜಾದೂನಿಂದ ಅವನ ಮನೆ ಪಕ್ಕದ ಕಸದ ಡಬ್ಬಿಗೆ ತಲುಪಿರುವುದಾಗಿ ಮತ್ತು ಅದೇ ಬೀದಿಗೆ ಬಿದ್ದಿರುವುದು ಖಚಿತವಾಗಿದೆ. ತಕ್ಷಣ ರ(ಸು)ದ್ದಿ ಮಾಡದಿದ್ದರೆ ಅಪ್-ಆಯಿಂಟ್‌ಮೆಂಟ್ ಕ್ಯಾನ್ಸಲ್....!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D