ಬೊಗಳೆ ರಗಳೆ

header ads


ಬಟ್ಟೆ ಧರಿಸಿದ ಮಲ್ಲಿಕಾ ಶರ್‌ಮಾ-ಮತ್ ದಾಖಲೆ
(ಬೊಗಳೂರು ರ-ಗೆಳೆಯ ಬ್ಯುರೋದಿಂದ)
ಬೊಗಳೂರು, ಮೇ 8- ನಂಬಿದ್ರೆ ನಂಬಿ, ಬಿಟ್ರೆ ಬಿಡ್ಬೇಡಿ. ಮಲ್ಲಿಕಾ ಶರ್‌ಮಾ ಮತ್ ಎಂಬ ಬಿಚ್ಚೋಲೆ ಗೌರಮ್ಮ ಮೈತುಂಬಾ ಉಡುಗೆ ಧರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಅದೂ ಕೂಡ ಪಬ್ಲಿಕ್ ಆಗಿ! ಅಷ್ಟು ಮಾತ್ರವಲ್ಲ, ಅಭಿಮಾನಿ ಪೊಲೀಸರು ಎಷ್ಟೇ ಕೂಗಾಡಿದರೂ ಆಕೆ ಬಟ್ಟೆ ಬಿಚ್ಚಲು ಕೇಳಲೇ ಇಲ್ಲ!

ಯಾವತ್ತೂ ಹುಟ್ಟುಡುಗೆಯನ್ನೇ ಇಷ್ಟಪಡುತ್ತಿರುವಂತೆ ಕಾಣಿಸುವ ಈ ನಾಚುವ, ನಾಚ್ತಾ ಹುವಾ, ಬಟ್ಟೆ ಬಿಚ್ತಾ ಹುವಾ ಬಿಕಿನಿ ಸುಂದರಿ, ಅಪರೂಪಕ್ಕೊಮ್ಮೆ ಮೈತುಂಬಾ ಬಟ್ಟೆ ಧರಿಸಿದ ಕಾರಣಕ್ಕೋ ಏನೋ, ನಾಚಿ ನೀರಾದ ಕಾರಣ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕ್ಷಣ ಪ್ರವಾಹ ಬಂದಿತ್ತು.

ಯಾವತ್ತೂ ಬಟ್ಟೆ ಬಿಚ್ಚೀ ಬಿಚ್ಚೀ ಬೇಜಾರಾದಾಗಲೊಮ್ಮೆ ಆಕೆ ಮೈಮುಚ್ಚಿಕೊಳ್ಳುವ ಬುರ್ಖಾ ಧರಿಸಿದ್ದಿರಬಹುದು ಎಂಬುದು ಈ ವರದಿಗೆ ಪ್ರತಿಕ್ರಿಯಿಸಿದ ಮಾವಿನ ಅರಸರ ಶಂಕೆ.

ಸಲ್ಮಾನ್ ಬೆದರಿಕೆ: ಈ ಮಧ್ಯೆ, ತನಗಿಂತಲೂ ಕನಿಷ್ಠ ಉಡುಗೆ ಧರಿಸಿ ತನ್ನನ್ನು ಹಿಂದಿಕ್ಕಿದ್ದ ನಟೀಮಣಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಲ್'ಮಾನ' ಖಾನಾ, ಈಕೆ ಬಟ್ಟೆ ಬಿಚ್ಚುವ ಸಂಘದವರ ಮಾನ ತೆಗೆಯುವ ಸಲುವಾಗಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಬಟ್ಟೆ ತೊಟ್ಟಿದ್ದೇಕೆ ಎಂದು ಕೆಂಡಕಾರಿದ್ದಾನೆ.

---------------------------------------------------
ಪತ್ತೆ: ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ (6 ಮೇ 2006) ಚಿನ್ನದ ಬೆಲೆ 10 ಗ್ರಾಂ.ಗೆ 10030 ರೂ.
ಅದೇ ರೀತಿ ಬೊಗಳೆ ರಗಳೆಯ ಒದೆತದ (ಹಿಟ್) ಕೌಂಟರ್ ಬೆಲೆಯು ಬೆಳಗ್ಗೆ 10.30ರವೇಳೆಗೆ 1030 ತಲುಪಿತ್ತು ಎಂದು ಮಂಗಳೂರಿಗರೊಬ್ಬರು ಪತ್ತೆ ಮಾಡಿದ್ದಾರೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಬೊಗಳೆ-ರಗಳೆಗೆ ಹೊಸ ತಲೆ ಮಾಡಿಕೊಟ್ಟ ಮಂಗಳೂರಿನ ರೋಹಿದಾಸ್ ಅಭಿನಂದನಾರ್ಹರು.- ಅಸತ್ಯಾನ್ವೇಷಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಪಾಪದ ಹೆಣ್ಣುಮಗಳಿಗೆ ಕೆಟ್ಟ ದೃಷ್ಟಿ ತಗುಲಬಾರದೆಂದು ಅವರಮ್ಮ ಮೈ ಪೂರಾ ಮುಚ್ಚುವಂತಹ ಬುರ್ಖಾ ಹಾಕಿದ್ರೆ, ನೀವು ಹೀಗೆ ವರದಿ ಮಾಡುವುದಾ? (ಇದು ನನ್ನ ಪ್ರತಿಕ್ರಿಯೆಯಲ್ಲ - ನನ್ನ ಪ್ರತಿಕ್ರಿಯೆ ನೀವಾಗಲೇ ಪ್ರಕಟಿಸಿದ್ದೀರ - ನನ್ನ ಸ್ನೇಹಿತ ನನ್ಮೂಲಕ ಹೇಳ್ತಿದ್ದಾನೆ)

    ಪ್ರತ್ಯುತ್ತರಅಳಿಸಿ
  2. ಬಹುಶಃ ಹೀರೋಯಿನ್ ಆಗಲು ಹೊರಟಿರುವ ಶರಮ್ ಮತ್ ಹುಡುಗಿ, ಬುರ್ಖಾದೊಳಗೆ ಹೆರಾಯಿನ್ ಇರಿಸಿಕೊಂಡಿರುವ ಕಾರಣದಿಂದಾಗಿ ಬಟ್ಟೆ ಬಿಚ್ಚಲು ಕೇಳಲಿಲ್ಲವೇ ಎಂಬ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  3. ಅನಾಮಧೇಯಮೇ 11, 2006 11:41 AM

    ತಿಂಗಳೊಳಗೆ ಸಹಸ್ರಮಾನವೇ?
    ಹಾಗಿದ್ದರೆ ನೀವು ಪ್ರಿಂಟ್ ಎಡಿಶನ್ ಯಾವಾಗ ತರುತ್ತೀರಿ?

    ಪ್ರತ್ಯುತ್ತರಅಳಿಸಿ
  4. ಪ್ರಿಂಟ್ ಎಡಿಶನ್ ಕೇವಲ ಕೋಟ್ಯಂತರ ಮಂದಿಗೆ ಮಾತ್ರ ತಲುಪುವುದರಿಂದಾಗಿ ಅದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D