ಬೊಗಳೆ ರಗಳೆ

header ads

ಓದುಗರಿಗೊಂದು ಸವಿನಯ ಧಮಕಿ
"ತಾಂತ್ರಿಕ ಕಾರಣ"ಗಳಿಂದಾಗಿ ನಮ್ಮ ಇ-ಕಸದ ಬುಟ್ಟಿಯ ಏ.11ರ ಸಂಚಿಕೆಯಲ್ಲಿ ಪ್ರಕಟವಾದ "ಮಾನವರಿಗೆ ಹೋಲಿಸಿ ಗಾರ್ದಭ ಕುಲಕ್ಕೆ ಅವಮಾನ: ಕತ್ತೆಗಳ ತೀವ್ರ ಪ್ರತಿಭಟನೆ" ವರದಿ ಪುಟಕ್ಕೆ ಅಂಟಿಕೊಳ್ಳಲು ಕೇಳುತ್ತಲೇ ಇಲ್ಲ. ಈ ಕತ್ತೆ ಸುದ್ದಿಯನ್ನು ಎಷ್ಟು ಬಾರಿ ತಂದು ಎಳೆದು ಪುಟದ ಗೂಟಕ್ಕೆ ಕಟ್ಟಿ ಹಾಕಿದರೂ ಆಗೊಮ್ಮೆ-ಈಗೊಮ್ಮೆ ಇಣುಕಿ, ಮತ್ತೆ ಸ್ವಯಂಚಾಲಿತವಾಗಿ ನಾಪತ್ತೆಯಾಗುತ್ತಿದ್ದ ಕಾರಣ, ಹತಾಶ ಅಭಿಮಾನಿಗಳು ಕಸದ ಬುಟ್ಟಿ ತುಂಬಾ ಕಸ ಎಸೆದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕೆ ಗಾರ್ದಭ ರಾಜ್ ಅವರು ಕೂಡ "ನಮ್ಮ ವರದಿ ನಿಮ್ಮಲ್ಲಿ ಪ್ರಕಟವಾಗಲೇ ಇಲ್ಲ, ನಮ್ಮನ್ನೇನು ನಿಮ್ಮಷ್ಟು ಮೂರ್ಖರೆಂದು ತಿಳಿದಿದ್ದೀರೆ" ಎಂದು ಆಕ್ಷೇಪಿಸಿದ್ದಾರೆ. ಈ ಸುದ್ದಿ ಪ್ರಕಟವಾಗದ ಕಾರಣಕ್ಕೆ ಓದುಗರಿಗೆ ಆದ ಅನುಕೂಲಕ್ಕೆ ನಾವು ಸಂತಾಪ ಸೂಚಿಸುತ್ತೇವೆ.ಕತ್ತೆ ಪುರಾಣ ಯಾಕೆ ಆಗುತ್ತೆ ನಾಪತ್ತೆ ಅಂತ ಶೋಧಿಸಲು ನಮ್ಮ ಅಸತ್ಯಾನ್ವೇಷಣ ತಂಡ ಹೊರಟಿದೆ. ಎರಡೆರಡು ಬಾರಿ ಬ್ಲಾಗ್ ನಲ್ಲಿ ತುರುಕಿದರೂ ಈ ಕತ್ತೆ ಚಿತ್ರ ಸಮೇತ ನಾಪತ್ತೆಯಾಗುವುದು ನಮಗೆ ನಮ್ಮ ಪ್ರತಿಸ್ಪರ್ಧಿಗಳ ಕೈವಾಡವಿದೆಯೋ ಎಂಬ ಶಂಕೆಗೆ ಕಾರಣವಾಗಿದೆ. ಆ ಕತ್ತೆಯನ್ನು ಮತ್ತೆ ಹಿಡಿದು ತರುತ್ತೇನೆ ಎಂದು ಆಶ್ವಾಸನೆ ನೀಡುತ್ತಿದ್ದೇನೆ. ಅಲ್ಲಿವರೆಗೆ ನೀವು ಮೇಲಿನ ವರದಿಯ ಲಿಂಕ್ ಕ್ಲಿಕ್ಕಿಸಿದರೆ ಕತ್ತೆ ಪತ್ತೆ ಆಗುತ್ತೆ. ಗುಡ್ ಲಕ್.
-ಸಂಪಾದಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಮಾನ್ಯರೇ,
    ಗಾರ್ದಭ ನಾಪತ್ತೆಯಾಗಿರುವುದು, "ಮಾನವರಿಗೆ ಹೋಲಿಸಿ ಗಾರ್ದಭ ಕುಲಕ್ಕೆ ಅವಮಾನ" ಎಂಬ ಲೇಖನಕ್ಕೆ ಗಾರ್ದಭ ಕುಲದವರಿಂದ ವಿನೂತನ ಪ್ರತಿಭಟನೆಯೇ?

    ಪ್ರತ್ಯುತ್ತರಅಳಿಸಿ
  2. ನಮ್ಗೂನೂ ಅದೇ ಡೌಟಿತ್ರೀ ಸಾಹೇಬ್ರಾ...
    ಅದ್ಕೇ ನಾವು ಕತ್ತೇ ಕಾಯ್ತಾ ಕುಂತೀವಿ... ಆಮ್ಯಾಕ್ ತಪ್ಪ ತಿಳಕೋಬ್ಯಾಡ್ರೀ... ಕತ್ತೆ ಬರೋದನ್ನೇ ಕಾಯ್ತಾ ಇದೀವಿ ಅಂತ....!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D