[ಬೊಗಳೂರು ಭೂಕ್ವೇಕ್ ಬ್ಯುರೋದಿಂದ]
ಬೊಗಳೂರು, ಏ.28- ಅಲ್ಲಲ್ಲಿ ಭೂಕಂಪವಾಗುತ್ತಿರುವುದಕ್ಕೆ ಬಿಚ್ಚೋಲೆ ಗೌರಮ್ಮಗಳೇ ಕಾರಣ ಎಂದು ಇರಾನ್ ಧರ್ಮಗುರು ನೀಡಿದ್ದ ಹೇಳಿಕೆಯ ಹಿಂದೆ ಸತ್ಯಾಂಶವಿದ್ದುದು ಅಲ್ಲಲ್ಲಿ ಪತ್ತೆಯಾಗಿದೆ.
ಬಿಡದಿಯ ನಿತ್ಯಾನಂದ ಆಶ್ರಮ ಕಂಪಿಸುತ್ತಿರುವುದರ ಹಿಂದೆ ಈ ಕಾರಣದ ಜೊತೆಗೆ ಮತ್ತೂ ಹಲವಾರು ಕಾರಣಗಳಿರುವುದು ಗೊತ್ತಾಗಿರುವಂತೆಯೇ, ಈ ರೀತಿಯ ಭೂಕಂಪ ಆಗುವ ಸಾಧ್ಯತೆಗಳು ಎಲ್ಲೆಲ್ಲಿವೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ಯೂನೀಕ್ ಐಡೆಂಟಿಟಿ ಕಾರ್ಯಕ್ರಮ ಮಾದರಿಯಲ್ಲೇ ನಡೆಸಲು ವಿಪ್ರೋಸಿಸ್ ಮುಖ್ಯಸ್ಥರಾದ ಮೂರ್ತೇಕಣಿ ಅವರಿಗೆ ವಹಿಸಲಾಗಿದೆ ಎಂದು ಬಲ್ಲದ ಮೂಲಗಳು ತಿಳಿಸಿವೆ.
ಅವರು ಈಗಾಗಲೇ ಕೆಲಸ ಆರಂಭಿಸಿದ್ದು, ಇತ್ತೀಚೆಗಂತೂ ಬೆಂಗಳೂರಿನ ಎಂ.ಜಿ.ರೋಡ್ ಸಿಕ್ಕಾಪಟ್ಟೆ ನಡುಗಲಾರಂಭಿಸಿರುವುದು ಅವರಿಗೆ ಅಚ್ಚರಿ ಮೂಡಿಸಿಲ್ಲವಾದರೂ, ಕುತೂಹಲ ಮೂಡಿಸಿತ್ತು ಎಂದು ತಿಳಿದುಬಂದಿದೆ.
ಇದರ ನಡುವೆ, ಗಾಂಧಿನಗರದ ಗಲ್ಲಿಗಲ್ಲಿಗಳು ಮಾತ್ರವಲ್ಲದೆ, ಕಾಲೇಜು ಪರಿಸರಗಳಲ್ಲಿಯೂ ಭೂಕಂಪನವಾಗುತ್ತಿರುವುದು ಮತ್ತು ಕಂಪನವಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಿರುವುದಾಗಿ ಮೂಲಗಳು ವರದ್ದಿ ಮಾಡಿವೆ.
ಭೂಕಂಪನ ಕಾರಣ ಪತ್ತೆ ಹಚ್ಚಿದ್ದಕ್ಕಾಗಿ ಬೂಬ್‌ಕ್ವೇಕ್ ಪ್ರತಿಭಟನೆ ನಡೆಸಲಾಗಿದೆ ಎಂಬುದು ನಿಜವಾದರೂ, ಅದೇ ದಿನ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪಕ್ಕೂ, ತಮಗೂ ಸಂಬಂಧವಿಲ್ಲ ಎಂದು ಬೂಬ್‌ಕ್ವೇಕ್ ಆಯೋಜಕರು ಬೊಗಳೂರು ವರದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ಈ ರೀತಿ ಸ್ಪಷ್ಟನೆ ನೀಡುತ್ತಿರುವಾಗಲೇ ವರದ್ದಿಗಾರರ ಗುಂಡಿಗೆ ಢವಢವನೆ ಜೋರಾಗಿಬಡಿದುಕೊಂಡ ಕಾರಣ, ಕೆಳಗಿದ್ದ ನೆಲ ಸ್ವಲ್ಪಸ್ವಲ್ಪವೇ ಅದುರತೊಡಗಿತ್ತು ಎಂದು ಲೈವ್ ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕಾಲೇಜಿನ ಪರಿಸರಗಳಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿರುವುದು, ರಸ್ತೆಗಳು ಮಣ್ಣೆದ್ದುಹೋಗಿರುವುದಕ್ಕೂ ಸಂಬಂಧವಿರಬೇಕೆಂದು ಶಂಕಿಸಲಾಗುತ್ತಿದೆ.
ಈ ನಡುವೆ, ಬೊಗಳೂರು ಸಂಚೋದಕರ ಪಡೆಯೊಂದು ಭೂಕಂಪ ಹೆಸರು ಬರಲು ಕಾರಣವಾಗಿದ್ದೇ ಈ ಬೂಬ್ ಕ್ವೇಕ್ ಅಂತ ವಾದಿಸಲು ತೊಡಗಿದೆ. ಅದು ಭೂಬ್‌ಕ್ವೇಕ್ ಆಗಿದ್ದು, ಕಾಲಾನುಕ್ರಮದಲ್ಲಿ ಬಾಯಿಂದ ಬಾಯಿಗೆ ಹರಡಿ, ಜರಡಿಯಲ್ಲಿ ಸಾರಿಸಿದಂತಾಗಿ, ಕೊನೆಗೆ ಭೂ-ಕ್ವೇಕ್ ಮಾತ್ರ ಉಳಿದುಕೊಂಡಿತ್ತು. ಆ 'ಭೂ' ಶಬ್ದವು ಭಾಷಾಂತರಗೊಂಡು ಅರ್ಥ್ ಆಗಿ, ಅರ್ಥ್ ಕ್ವೇಕ್ ಅಂತ ಪ್ರಸಿದ್ಧಿಯಾಯಿತು ಎಂದು ಒಣವಾದವನ್ನು ಮಂಡಿಸಿದೆ.
6 ಕಾಮೆಂಟ್‌ಗಳು
ಅನ್ವೇಷಿಯವರ ಸಂಶೋಧನೆಯಿಂದಾಗಿ ಬೂಬ್-ಗೋಲದಲ್ಲಿ ಮಹಾಕಂಪನ!
ಪ್ರತ್ಯುತ್ತರಅಳಿಸಿಬೂಬ್ ಕ್ವೇಕ್ ಗೆ ಸಕಾರಣವನ್ನು ಪತ್ತೆಹಚ್ಚಿದ್ದಕ್ಕಾಗಿ ಬೊಗಳೂರು ಬ್ಯೂರೋಗೆ ಪ್ರಶಸ್ತಿ ಕೊಡಲಾಗುತ್ತಿಲ್ಲ..!
ಪ್ರತ್ಯುತ್ತರಅಳಿಸಿಅನ್ವೇಷಿಗಳು ಸಂಚೋದಿಸಿದ್ದಾರೆ ಅಂದ ಮೇಲೆ ನಂಬಬೇಕಾದ್ದೇ! ಇಲ್ಲಿ ವರ್ಷ ವರ್ಷವೂ http://www.stuff.co.nz/national/2894134/Crowds-turn-out-for-Boobs-on-Bikes-parade/?gclid=CLOt45DorKECFRd7gwod8i6REQ
ಪ್ರತ್ಯುತ್ತರಅಳಿಸಿನಡೆಸುವುದನ್ನು ನೋಡಿದರೆ, ನಮಗಿನ್ನೇನು ಕಾದಿದೆಯೋ?!
ವಿ.ಸೂ: ಚಿತ್ರಗಳನ್ನು ನೋಡಿ, ಬೊ-ರ ಕಂಪಿಸಿ....ಕುಸಿದು ಬಿದ್ದರೆ ನಾನು ಜವಾಬ್ದಾರಗಳಲ್ಲ!
ಸುನಾಥರೇ,
ಪ್ರತ್ಯುತ್ತರಅಳಿಸಿಕಂಪನದಿಂದಾಗಿಯೇ ವಿಮಾನಾಪಘಾತವಾಗಿದೆಯಂತ ನಮಗೀಗ ಸುದ್ದಿ ಬಂದಿದೆ!
ಸುಬ್ರಹ್ಮಣ್ಯ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಪ್ರಶಸ್ತಿಗೆ ಹೆದರಿ ನಮ್ಮ ಏಕೈಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಅಡಗಿ ಕುಳಿತಿದ್ದಾರೆ. ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಮೇಲಷ್ಟೇ ನಾವು ವೃತ್ತಿಗೆ ಇಳಿಯುತ್ತೇವೆ ಎನ್ನುತ್ತಿದ್ದಾರೆ...
ನೀಲಗಿರಿಯವರೇ,
ಪ್ರತ್ಯುತ್ತರಅಳಿಸಿನೀವು ಕೊಟ್ಟ ಆ ಲಿಂಕಿನಿಂದ ಚೇತರಿಸಿಕೊಳ್ಳಲಾಗದ ಆಘಾತವಾಗಿ ಒಂದು ತಿಂಗಳ ನಂತರ ಪ್ರಜ್ಞೆ ಬಂದು ಮರಳಿ ಕಾಮೆಂಟಿಸುತ್ತಿದ್ದೇವೆ ಕಣ್ರೀ... ಅಬ್ಬಾ... ಉಸ್...!
ಏನಾದ್ರೂ ಹೇಳ್ರಪಾ :-D