[ಇದು off the track... ಇದು ಬೊಗಳೆ ಅಲ್ಲ, ನಿಮಗೊಂದಿಷ್ಟು ದೀರ್ಘ ರಗಳೆ]
(ಬ್ಲಾಗಿಸುವಿಕೆಗಿಂತನ್ಯ ತಪವು ಇಲ್ಲ... ಬ್ಲಾಗಬಲ್ಲವರಿಂಗೆ ಪೇಳುವೆನು ಸೊಲ್ಲ... ಅಂತ ದಾಸರು ಈಗಿದ್ದಿದ್ದರೆ ಹಾಡುತ್ತಿದ್ದರೇನೋ ಎಂಬಷ್ಟರ ಮಟ್ಟಿಗೆ ಬೆಳೆದ ಬ್ಲಾಗ್ ಜಗತ್ತಿಗೆ ಕಾಲಿಟ್ಟ ಬಗ್ಗೆ ಒಂದಿಷ್ಟು ಅನಿಸಿಕೆ.
ಮೊದಲಾಗಿ ಬೊಗಳೆ ರಗಳೆ ಬ್ಯುರೋದ ಎಲ್ಲಾ ಓದುಗರಿಗೆ ನಮೋ ನಮಃ.
ಕಳೆದ ಏಪ್ರಿಲ್ ತಿಂಗಳಾರಂಭದಲ್ಲಿ ಅದ್ಯಾವ ಗಳಿಗೆಯಲ್ಲಿ ಈ ಬೊಗಳೆ ಬಿಡಲು ಆರಂಭಿಸಿದೆನೋ... ಇಂದು ವಿಶ್ವಾದ್ಯಂತ ಇರುವ ಕನ್ನಡಪ್ರೇಮಿಗಳ ಕುತೂಹಲಭರಿತ net ಕಣ್ನೋಟಗಳ ಕಾರಣದಿಂದಾಗಿ ಈ ಬ್ಲಾಗಿನ ಹಿಟ್ ಕೌಂಟರ್ 10 ಸಹಸ್ರ ದಾಟುತ್ತಿರುವುದು ಅತೀವ ಸಂತಸ ತರುತ್ತಿದೆ. ಇದೇ ಸಂದರ್ಭ Blog Postಗಳ ಸಂಖ್ಯೆ ಕೂಡ ಶತಕ ದಾಟಿದ ಸಂಭ್ರಮ. ಇದು ಕಾಕತಾಳೀಯ. ಅಂದರೆ ಇದು ಈ ಬ್ಲಾಗಿನಲ್ಲಿ ನನ್ನ 111ನೇ ಲೇಖನ. ಬಹುಶಃ ನೆಟ್‌ನಲ್ಲೇ ಜಾಲಾಡುತ್ತಾ ಇರೋ ಜನರಿಗೆ ಸಣ್ಣ ಸಂಗತಿಯಾಗಿ ಕಂಡೀತಾದರೂ ಇದು ನನ್ನ ಮಟ್ಟಿಗೆ ದೊಡ್ಡ ಸಂಗತಿಯೇ. ಇದಕ್ಕೆ ಕಾರಣ ಕೆಳಗೆ ಹೇಳಿದ್ದೇನೆ. ಅದಕ್ಕಾಗಿ ನಿಮಗೆ ಒಂದಿಷ್ಟು ಕಿರಿಕಿರಿ ಮಾಡುತ್ತಿದ್ದೇನೆ.
ಈ ನಾಲ್ಕೈದು ತಿಂಗಳ ಅವಧಿಯಲ್ಲಿ, ಅಪರಿಚಿತನಾಗಿದ್ದುಕೊಂಡೇ ನಾನು ಗಳಿಸಿಕೊಂಡ ಮಿತ್ರರ, ಆತ್ಮೀಯರ ಸಂಖ್ಯೆ ನೋಡಿದರೆ ಮನದುಂಬಿ ಬರುತ್ತದೆ. ಮತ್ತೆ ಕೆಲವರು ನನ್ನ ಪರಿಚಯ ಹೇಳದಿರಲು ಸಾಧ್ಯವೇ ಇಲ್ಲ ಎಂಬಷ್ಟು ಆತ್ಮೀಯರಾಗಿಬಿಟ್ಟಿದ್ದಾರೆ. ಮಾತು ಬೆಳ್ಳಿಯಾದರೆ, ಮೌನ ಬಂಗಾರ ಎಂಬ ಧ್ಯೇಯಕ್ಕೆ ಕಟ್ಟುಬಿದ್ದವ ನಾನು. ಬಹುಶಃ ಈ ಕಾರಣಕ್ಕೆ ಬಹಿರಂಗ ಪ್ರಪಂಚದಲ್ಲಿ ಮಿತ್ರರ ಕೊರತೆ ಎದುರಿಸುತ್ತಿದ್ದೆನೋ ಏನೋ, ಆದರೆ ಈ ಬ್ಲಾಗ್ ಮುಖಾಂತರ ಅನಾಮಿಕನಾಗಿದ್ದುಕೊಂಡು ಗಳಿಸಿಕೊಂಡ ಗೆಳೆಯರ ಬಳಗ ಹೃದಯತುಂಬಿ ಬರುವಷ್ಟು ದೊಡ್ಡದು. ಕೇವಲ ಒಂದೆರಡು ತಿಂಗಳಲ್ಲೇ ಅವರಲ್ಲಿ ಕೆಲವರಂತೂ ಬಹಳ ವರ್ಷಗಳಿಂದಲೇ ನಾವು ಪರಿಚಿತರು ಅನ್ನುವಷ್ಟು ಆತ್ಮೀಯರಾಗಿದ್ದಾರೆ. ಒಟ್ಟಿನಲ್ಲಿ.. ನನ್ನ ಜೀವನದಲ್ಲಿ ನಿಮ್ಮಂಥ ಸನ್ಮಿತ್ರರು ಸಿಗಲು ಈ ಬ್ಲಾಗು ವೇದಿಕೆಯಾಗಿದೆ. ಈ ಮಿತ್ರರನ್ನು ಪಡೆದ ಸಂತೋಷ ಇದೆಯಲ್ಲಾ.... ಅದುವೇ ನನ್ನ ಸ್ವಾರ್ಥ ಅಂತ ಮೊದಲೇ ಸ್ಪಷ್ಟವಾಗಿ ಹೇಳುತ್ತಿದ್ದೇನೆ.
ದುಃಖ ದುಮ್ಮಾನಗಳು ಮಾನವ ಸಹಜವಾದುದು. ಅಂಥ ಸಹಜ ಕಾರಣವೊಂದಕ್ಕೆ ಮುದುಡಿಹೋಗಿದ್ದ ಮನಸ್ಸು ದಾರಿ ತಪ್ಪಿ ಎಲ್ಲೆಲ್ಲೋ ಓಡಾಡುತ್ತಾ ನಿಯಂತ್ರಣ ಕಳೆದುಕೊಳ್ಳುವ ಹಂತಕ್ಕೆ ಬಂದು ಮುಟ್ಟಿದಾಗ ಹೊಸದಾಗಿ ಮತ್ತು ಆಕಸ್ಮಿಕವಾಗಿ ಪರಿಚಯವಾದದ್ದು ಈ ಬ್ಲಾಗಿಸುವಿಕೆ. ಇದರತ್ತ ಪೂರ್ಣ ಮನಸ್ಸು ಕೇಂದ್ರೀಕರಿಸಿದ ಬಳಿಕ ನಾನು ನಾನೇ ಆಗಿ ಉಳಿದುಬಿಟ್ಟೆ. ಬ್ಲಾಗ್ ವಿಹಾರ ಮಾಡುತ್ತಿದ್ದಾಗ ಕಣ್ಣಿಗೆ ರಾಚಿದ್ದು ಮಜಾವಾಣಿ ಎಂಬ ತಾಣ. ಅದುವೇ ನನ್ನ ಈ ಅಭಿಯಾನಕ್ಕೆ ಪ್ರೇರಣೆ ಎಂದರೂ ತಪ್ಪಲ್ಲ.
ಒಂದಿಷ್ಟು ದಿನ ರಜೆ ಹಾಕಿ ಊರಿಗೆ ಹೋದಾಗ Blog ಓದುಗರು comments ಮೂಲಕ ತೋರಿದ ಆದರ, ಕಳಕಳಿ, ಪ್ರೀತಿ ವಾತ್ಸಲ್ಯದ ಮಾತುಗಳನ್ನು ಮರೆಯಲು ಸಾಧ್ಯವೇ?
ವಾಸ್ತವವಾಗಿ ಬ್ಲಾಗ್ ಅನ್ನೋ ಒಂದು ಸಂಗತಿ ಇದೆ ಎಂಬುದು computer illiterate ಆಗಿರೋ ನನಗೆ ಗೊತ್ತಾದದ್ದೇ 2006 ಮಾರ್ಚ್ ಉತ್ತರಾರ್ಧದಲ್ಲಿ. ಅದುವರೆಗೆ ಇಂಟರ್ನೆಟ್ ಕೂಡ ನನಗೆ ಅಷ್ಟೇನೂ ಪರಿಚಯವಿರಲಿಲ್ಲ. ಕೆಲವೊಂದು ಇ-ಮೇಲ್, news sites ಮಾತ್ರ ಜಾಲಾಡುತ್ತಿದ್ದೆ. ಬಹುಶಃ ಇದೇ ಕಾರಣಕ್ಕೆ ನನಗಿದೊಂದು ದೊಡ್ಡ ವಿಷಯವಾಗಿರುವುದು.
ಹಾಗಿದ್ದರೆ ಬ್ಲಾಗು ಆರಂಭಿಸಿ ಅದರಲ್ಲೇನು ತುಂಬುವುದು? ಬಹುಶಃ ಇಂಟರ್ನೆಟ್ ವಿಹಾರಿಗಳೆಲ್ಲರೂ ಯಾಂತ್ರಿಕ ಅಥವಾ ತಾಂತ್ರಿಕ ಯುಗ ಎನ್ನಬಹುದೇನೋ... ಅಂತೂ ಅವಸರದ ಯುಗದಲ್ಲಿದ್ದಾರೆ. ಕಂಪ್ಯೂಟರ್ ಜಗತ್ತಿನ ಕೆಲಸ ಕಾರ್ಯಗಳೇ ಅಂಥದ್ದು, ದಿನವಿಡೀ ದಣಿದು ಬಂದ ಮನಸ್ಸುಗಳನ್ನು ಒಂದಿಷ್ಟು ಉಲ್ಲಸಿತಗೊಳಿಸುವ ಒಂದಿಷ್ಟು stuff ಹಾಕಬಾರದೇಕೆ ಎಂಬುದು ಹೊಳೆದದ್ದೇ ತಡ, "ಸ್ವಲ್ಪ ಕಾಯಿರಿ ಅಸತ್ಯಾನ್ವೇಷಣೆಗೆ ಹೊರಟಿದ್ದೇನೆ" ಎಂದು ಬರೆದುಬಿಟ್ಟು.... ಒಂದೆರಡು ದಿನ ಯೋಚಿಸಿದೆ.
ಬರೇ ಮನರಂಜನೆ ಕೊಟ್ಟರೆ ಸಾಲದು, ಮಾಹಿತಿ ಕೂಡ ಇರಲಿ, ಮಾತ್ರವಲ್ಲ ಇನ್ನೊಂದು ಅತ್ಯಂತ ಪ್ರಮುಖ ವಿಷಯ ಎಂದರೆ ಓದುಗರಿಗೆ ಓದುವ ತಾಳ್ಮೆ ಬೇಕಲ್ಲಾ... ಅದಕ್ಕಾಗಿ ಚಿಕ್ಕ-ಚೊಕ್ಕ ಲೇಖನ ಹಾಕೋಣ ಎಂದು ನಿಶ್ಚಯಿಸಿ ಕಾರ್ಯರೂಪಕ್ಕಿಳಿದೆ. 2-3-4 ದಿನಗಳಿಗೊಮ್ಮೆ ಏನಾದರೂ ಬರೆದು ಹಾಕುತ್ತಿದ್ದೆ. ಅಂತೂ ಈಗ ದಿನಕ್ಕೊಂದು stuff ಹಾಕಬೇಕಾದ ಅನಿವಾರ್ಯತೆಗೆ ಸಿಲುಕುವಂತೆ ನೀವೆಲ್ಲಾ ಮಾಡಿದ್ದೀರಿ! ಹಾಗಂತ ನಾನು ಬ್ಲಾಗಿಸುತ್ತಿರುವುದು ದೊಡ್ಡ ಸಾಧನೆ ಅಂತ ಹೇಳಿಕೊಳ್ಳಲು ಈ ಲೇಖನವಲ್ಲ. ಕೆಲವೊಂದು ಬ್ಲಾಗೋದುಗರ ಒತ್ತಾಸೆಗೆ ಸ್ಪಂದಿಸಬೇಕಾಗಿರುವ ಕಾರಣ ಈ ಬರಹ.
ಒಟ್ಟಿನಲ್ಲಿ ನಾಲ್ಕೈದು ತಿಂಗಳ ಈ ಅವಧಿಯಲ್ಲಿ ನನ್ನ ಬ್ಲಾಗು ಬೆಳೆಯಲು, ಬೆಳೆಸಲು ಸಲಹೆ ಸೂಚನೆ ನೀಡುತ್ತಾ, ಮಾತ್ರವಲ್ಲದೆ ಟೀಕೆ-ಟಿಪ್ಪಣಿ ಮೂಲಕವೂ ಆಗಾಗ್ಗೆ ನನ್ನ ಮೆದುಳಿಗೆ ಒಂದಿಷ್ಟು 'ಮೇವು' ನೀಡುತ್ತಾ ಪೋಷಿಸುತ್ತಿರುವವರಿಗೆಲ್ಲಾ ನಾನು ಚಿರಋಣಿ.
ಇದು Statcounter ಅಳವಡಿಸಿದ ಬಳಿಕದ ಲೆಕ್ಕಾಚಾರವಷ್ಟೆ. ಈ ಕೌಂಟರು ಜಾಲಾಡಿದಾಗ ನನ್ನ ಮನಸ್ಸು ಮತ್ತಷ್ಟು ಪ್ರಫುಲ್ಲಿತವಾಗಿದೆ. ಇದಕ್ಕೆ ಕಾರಣವೆಂದರೆ ನನ್ನ ಬ್ಲಾಗಿನ ಓದುಗರ ಸಂಖ್ಯೆ ಹೆಚ್ಚುತ್ತಿರುವುದು. ಕರ್ನಾಟಕ, ಭಾರತಕ್ಕಿಂತಲೂ ಹೊರ ದೇಶಗಳಲ್ಲೇ ಈ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಮತ್ತೊಂದು ವಿಶೇಷ. ಆರಂಭದಲ್ಲಿ ಭಾರತ ಮತ್ತು ವಿದೇಶದ ಓದುಗರ ಪ್ರಮಾಣ 80:20 ಅನುಪಾತದಲ್ಲಿ ಇದ್ದರೆ, ಈಗ ಅದು ಉಲ್ಟಾ ಆಗಿಬಿಟ್ಟಿದೆ. ದೇಶ ಬಿಟ್ಟು ಹೊರಗಿರುವವರಿಗೆ ತಮ್ಮ ತವರೂರು, ಭಾಷೆ ಮೇಲೆ ಅಭಿಮಾನ, ಕಳಕಳಿ ಹೆಚ್ಚು ಎಂಬುದನ್ನು ಈ ಸಂದರ್ಭದಲ್ಲಿ ಕಂಡುಕೊಂಡಿದ್ದೇನೆ.
ಬ್ಲಾಗಿನಲ್ಲಿನ ಅಂಶಗಳಿಂದ ಅಥವಾ ಅವಸರ commentನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುವುದರೊಂದಿಗೆ, ಈ ತಾಣಕ್ಕೆ ಭೇಟಿ ನೀಡುವ ಸಕಲ ಓದುಗರಲ್ಲಿ ಒಂದು ವಿನಂತಿ: ದಯವಿಟ್ಟು, ಈ on-line ಬ್ಲಾಗು ಹೇಗನಿಸಿತು, ಹೇಗಿರಬೇಕಿತ್ತು, ಯಾವುದು ಇಷ್ಟವಾಗಲಿಲ್ಲ ಅಂತ ಇಲ್ಲೊಂದು one-line ಅನಿಸಿಕೆ ಕೊಟ್ಟುಬಿಡಿ. ಇದು ಕೂಡ ಕುತೂಹಲ ತಣಿಸಿಕೊಳ್ಳುವ ಸ್ವಾರ್ಥ !
(ಕನ್ನಡ ಫಾಂಟ್ ಇಲ್ಲದವರು ಇಂಗ್ಲಿಷ್ ಬಳಸಿದರೂ ಯಾವುದೇ ಮುಜುಗರ ಇಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇನೆ.)
32 ಕಾಮೆಂಟ್‌ಗಳು
ಡಿಯರ್ ಅಸತ್ಯಿ !
ಪ್ರತ್ಯುತ್ತರಅಳಿಸಿದಶಸಹಸ್ರದ ಹಾಗೂ ಶತಕದ ಬೊಗಳೆ ಸಂಭ್ರಮಕ್ಕೆ ಅತ್ಮೀಯ ಅಭಿನಂದನೆಗಳು..
ಅದು ಹೆಂಗೆ ನಿಮ್ಮ ಬೊಗಳೆ-ರಗಳೆ ಸಿಗ್ತೋ ಗೊತ್ತಿಲ್ಲ..ಅದರೆ ಸಿಕ್ಕಾಗಿಂದ ನಿಮ್ಮ ಬೊಗಳೆ ಕೇಳಿ ಕೇಳಿ ಒಂದು ಸ್ಪಲ್ಪನೂ ರಗಳೆ ಆಗಲೇ ಇಲ್ಲ..
ಆಡು ಮುಟ್ಟದ ಸೊಪ್ಪಿಲ್ಲ..ಅಸತ್ಯಿ ಬಿಡದ ಬೊಗಳೆ-ರಗಳೆ ಇಲ್ಲ!!
ಇಷ್ಟವಾಗಿದ್ದು..
ನೀವು ಬೊಗಳೆ ಬಿಡೋ ರೀತಿ..ಆರಿಸಿಕೊಳ್ಳೋ ವಿಷಯಗಳು..
ಕಾಮೆಂಟಿಸಿವುದು
ಇಷ್ಟವಾಗದ್ದು..
ಯಾವಾಗಲೋ ಒಮ್ಮೊಮ್ಮೆ ಅವಸರಕ್ಕೆ ಬಿದ್ದವರ ತರ ಬರೆದುಬಿಡ್ತೀರಾ..ನಿಮ್ಮ ಒಂದು ಬ್ಲಾಗ್‍ನ ಕಾಮೆಂಟ್‍ನಲ್ಲಿ ನಾನು ಹೇಳಿದ್ದೆ 'ಓದುಗರು ನಿಮ್ಮಿಂದ ತುಂಬಾ ನಿರೀಕ್ಷಿಸುತ್ತಾರೆ' ಅಂತಾ..ಸೋ ನೋ ಫಾರ್ವಡ್ಸ್
ನಿಮ್ಮ ಬೊಗಳೆ ಹಿಂಗೆ ಸಾಗ್ತ ಇರಲಿ..
ಪ್ರೀತಿಯಿರಲಿ !
ಶತಕ - ದಶಶತಕದ ವಿಷಯ ತಿಳಿದು ಬಹಳ ಸಂತೋಷವಾಗುತ್ತಿದೆ. ಆದರೆ ದು:ಖದ ವಿಷಯ ಅಂದ್ರೆ ಇವತ್ತು ಬೊಗಳೆ ಇಲ್ಲದೇ ಬರೀ ರಗಳೆಯಾಗಿದೆ. ಇವತ್ತೊಂದು ದಿನ ನೀವು ಸಂತೋಷದಿಂದಿದ್ದು, ನಮ್ಮೆಲ್ಲರನ್ನೂ ದು:ಖ ಮರೆಯದಂತೆ ಮಾಡಿರುವುದು ಅತಿ ದು:ಖದಾಯಕ (ಸುಮ್ನೆ ತಮಾಷೆಗೆ - ಕಾಲೆಳೆಯುತ್ತಿದ್ದೀನಿ - ಹೃದಯಕ್ಕೆ ತೆಗೆದುಕೊಂಡು ಹೋಗಬೇಡಿ).
ಪ್ರತ್ಯುತ್ತರಅಳಿಸಿಬೊ - ರ ವಿಶ್ವವಿಖ್ಯಾತವಾಗುತ್ತಿರುವುದನ್ನು ಕಂಡು ನನ್ನ ಹೊಟ್ಟೆಯೊಳಗಿನ ರಸ ಕುದಿಯುತ್ತಿದೆ. (ಊಟದ ಸಮಯ ಹಸಿವಾಗುತ್ತಿದೆ).
ಡಿಯರ್ ಶಿವ್,
ಪ್ರತ್ಯುತ್ತರಅಳಿಸಿನಿಮ್ಮ ಸಲಹೆ ನಿಮ್ಮದು ಮಾತ್ರವಲ್ಲ, ಎಲ್ಲರದೂ ಆಗಿದೆ ಅಂತ ತಿಳಿಯುತ್ತೇನೆ...
ಇನ್ನು ಮುಂದೆ ಹಳಸಿದ ಫಾರ್ವರ್ಡ್‌ಗಳಿಗೆ ಅವಕಾಶವಿಲ್ಲ.
ನಿಮ್ಮ ಪ್ರೀತಿಗೆ ಧನ್ಯವಾದ.
ಮಾವಿನರಸರೆ,
ಪ್ರತ್ಯುತ್ತರಅಳಿಸಿನಿಮ್ಮ ಮನಸ್ಸಿನಲ್ಲಿ ಮಾತ್ರ ಮಾವಿನ ಸಿಹಿ ಇರುವುದು ಅಂತ ತಿಳಿದಿದ್ದೆ...
ಹೊಟ್ಟೆಯಲ್ಲೂ ಮಾವಿನ ರಸದ ಸಿಹಿ ಇದೆ....
ಧನ್ಯವಾದ.
century-ya sambhrama
ಪ್ರತ್ಯುತ್ತರಅಳಿಸಿIrali heege nimma Blogina krama
sagali nimma asatyanveshane
kalakali ellra antaralavanne
Shubhavagali
ಬೊಗಳೆ daily doseಗೆ ಅಂತ ಬಂದ್ರೆ ಏನಿದೇನಿದು senti ರಗಳೆ? ಇಷ್ಟೆಲ್ಲಾ thanks ಹೇಳೋದು, it's not like u, ಮತ್ತೆ ನಾವು ಬೊಗಳೆ-liking ಓದುಗರು, ಧನ್ಯವಾದದ ರಗಳೆ ನಮ್ಗೆ ಬೇಕಾಗಿಲ್ಲ.
ಪ್ರತ್ಯುತ್ತರಅಳಿಸಿ10k hits ಅನ್ನು celebrate ಮಾಡೊದಕ್ಕೆ ಅಂತ ಇರಾನ್ ನಿಂದ ಒಂದು special n-missile ನಿಮ್ಮ ಬ್ಯೂರೋದ ಮೇಲೆ hit ಆಗಬೇಕು ಅಂತ ಅಹ್ಮದಿಯಣ್ಣ order ಕೊಟ್ಟಿದ್ದಾರೆ.
ದೀಪ್ ಅವರೆ,
ಪ್ರತ್ಯುತ್ತರಅಳಿಸಿಅಂತರಾಳ ಮುಟ್ಟುವಂತೆ ತುಂಬಾ deep ಆಗಿ ಶುಭ ಹಾರೈಸಿದಕ್ಕೆ ಧನ್ಯವಾದ.
ಶ್ರೀಲತಾ ಪುಟ್ಟಿ ಅವರೆ,
ಪ್ರತ್ಯುತ್ತರಅಳಿಸಿಪುಣ್ಯ... ಬರೇ ಸೆಂಟಿ ಅಂತ ಹೇಳಿ ನಿಲ್ಸಿದ್ದೀರಿ... ಮುಂದಿನ ಪದ ಹೇಳಿದ್ದಿದ್ದರೇ.... ನಿಮ್ಹಾನ್ಸ್ !!!!
ನೀವು ಡೈಲಿ ದೋಸೆ ತಿನ್ನೋದೇ ಇಲ್ವಾ...?
ನಮ್ಮ ಇರಾನ್ ಪ್ರತಿನಿಧಿಗಳಾಗಿರುವ ನೀವು ಇನ್ನು ಸುದ್ದಿ ರವಾನಿಸಲು ಹೊಸ ಕೊಳವೆ ಮಾರ್ಗ ಮಾಡಿಸಲಾಗುತ್ತದೆ... ಅದೇ ಇರಾನ್ ಗ್ಯಾಸ್ ಪೈಪ್ ಲೈನ್...
ಅದ್ರಲ್ಲೇ ಅಹ್ಮದಿಯಣ್ಣನ ನ್ಯೂಕ್ಲಿಯಾರ್ ಕ್ಷಿಪಣಿಯನ್ನೂ ಹಾಕಿಬಿಡಿ.
10kಯಲ್ಲಿ ನಿಮ್ಮ ಬಾಂಬಿನ ಹಿಟ್ಟು ಕೂಡ ಸೇರಿದೆ... ತುಂಬಾ ಧನ್ಯವಾದ.
ಓಹೋ ಇದೇನು ನಮ್ಮ ಅಸತ್ಯಾನ್ವೇಷಿಗಳ ಬಾಯಲ್ಲಿ ಇಂತಹ ಭಾವನಾತ್ಮಕ ಡೈಲಾಗ್ಸ್ !! ನಂಬಲು ಕಷ್ಟವಾಗುತ್ತಿದೆ. (ಇಲ್ಲಿ ಯಾವ ಸ್ವಾರ್ಥ ಇಲ್ಲ ತಾನೇ :)
ಪ್ರತ್ಯುತ್ತರಅಳಿಸಿ೧೦,೦೦೦ ಮೆಟ್ಟಿಲ ಮೇಲಿಂದ ಕೆಳಗಿಳಿದು ಬನ್ನಿ. ಶುಭಾಶಯ ಹೇಳಬೇಕಾಗಿದೆ.
Mattomme, Comgratulations, Anveshi!
ಪ್ರತ್ಯುತ್ತರಅಳಿಸಿNimma ee post swalpa emotional aagittu, aadage chennaagittu.
Nanna prakaara, BogaLe RagaLe blog nalli naguvudakke, nagisuvudakke, mana bicchi maataaDuvudakke, nammavarODane iDanaaTakke... ondu... manch.
Anveshi, nimmanta bhale aadmi ka parichay gaagi nanoo kooDa nimma blog ge namana sallisuttEne.
Aap blogo hazaaro saal aur saal ke din ho pachaas hazaar!
Hattu saawira yaake, hattu kOTi (koti alla) lekhana gaLannu pooraisi.
Eega nim key-board yetti wave maaDi noDaNa!!!
ChappaaLe taTtiddEne!!
sindhu avaru hELtirOdEnu :o
ಪ್ರತ್ಯುತ್ತರಅಳಿಸಿbo-ra aNNAvru bhalE Admi
aisa to ham sab log bure hain kya
madam, aap hamaare blog me kyon aisa nahi likhte hain (just pulling leg - no bad intention
ಶ್ರೀ ತ್ರೀ ಅವರೆ,
ಪ್ರತ್ಯುತ್ತರಅಳಿಸಿಈ ಭಾವನ ಡೈಲಾಗ್ ಬಗ್ಗೆ ಹೇಳ್ಬೇಕೂಂದ್ರೆ, ಒಮ್ಮೊಮ್ಮೆ ನಮ್ಮೂರ ಪೊಲೀಸರು ಕೂಡ ಮಾನವೀಯತೆ ಪ್ರದರ್ಶಿಸೋ ಥರಾ ಇದು !!!
ಮತ್ತೆ ಇಳಿಯೋಷ್ಟು ಎತ್ತರಕ್ಕೆ ಏರಿಲ್ಲವಾದುದರಿಂದ ಇಲ್ಲೇ ಕೊಟ್ಬಿಡಿ.... ಶುಭ ಆಶಯನಾ!!!!
ಧನ್ಯವಾದ
ಸಿಂಧು ಅವರೆ,
ಪ್ರತ್ಯುತ್ತರಅಳಿಸಿಈ ಬ್ಲಾಗು, ನಗುವುದಕ್ಕೆ, ನಗಿಸುವುದಕ್ಕೆ, ಬಾಯಿಗೆ ಬಂದದ್ದನ್ನು ಉಗಿದುಬಿಡಲು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ವೇದಿಕೆಯಾಗಿದೆ ಎಂಬುದು ನಿಜಕ್ಕೂ ಸಂತೋಷದ ಸಂಗತಿ.
ಕೀಬೋರ್ಡ್ ಎತ್ತಿ ಕುಕ್ಕಿದಾಗ ಬೇರೆಲ್ಲೋ ಕಡೆ ಸುನಾಮಿ ವೇವ್ ಬಂತೂಂತ ವರದಿಯಾಗಿದೆ.
emotional ಆಗೋ ಲೇಖನ ಇದ್ರೆ ಪ್ಲುಟೋ ಗ್ರಹಕ್ಕಾದಂತೆ ಬೊಗಳೆ ರಗಳೆಗೂ demotion ದೊರೆಯದು ಎಂಬ ವಿಶ್ವಾಸದೊಂದಿಗೆ ಮತ್ತು ಧನ್ಯವಾದದೊಂದಿಗೆ...
-ಅನ್ವೇಷಿ
ಮಾವಿನರಸರೆ,
ಪ್ರತ್ಯುತ್ತರಅಳಿಸಿಸಿಂಧು ಅವರು ಸದ್ಯಕ್ಕೆ ಕೆನಡಿಯನ್ ಆದರೂ ಕನ್ನಡಿಯನ್ನೇ ಆಗಿ ಉಳಿದಿದ್ದಾರೆ....
Dear Anveshi,
ಪ್ರತ್ಯುತ್ತರಅಳಿಸಿnamaskAra.
Congrats!!!
I wish you and your blog all the best.
..
v.v.
ಅಭಿನಂದನೆಗಳು. ಕಾಯಕ ಮುಂದುವರೆಸಿ.
ಪ್ರತ್ಯುತ್ತರಅಳಿಸಿ-ಪವನಜ
ವಿಶ್ವಕನ್ನಡ
ಶ್ರೀಯುತ ವಿವಿ ಅವರೆ,
ಪ್ರತ್ಯುತ್ತರಅಳಿಸಿನಿಮ್ಮದೇ ನೆರಳಲ್ಲಿ ಏನೋ ಬೊಗಳುತ್ತಿದ್ದೇವೆ...
ನಿಮ್ಮ ಶುಭ ಹಾರೈಕೆಗೆ ಧನ್ಯವಾದ.
ನಮಸ್ಕಾರ.
ಪವನಜ ಅವರೆ,
ಪ್ರತ್ಯುತ್ತರಅಳಿಸಿನಿಮ್ಮಂಥ ಹಿರಿಯರ ಪ್ರೋತ್ಸಾಹ ಸದಾ ಇರಲಿ.
ಧನ್ಯವಾದಗಳು.
>ಪವನಜ ಅವರೆ
ಪ್ರತ್ಯುತ್ತರಅಳಿಸಿಅಂತೂ ಈ ಅವರೆ ಕಾಳಿನಿಂದ ಬಿಡುಗಡೆಯೇ ಇಲ್ಲ ಎಂದು ತೋರಿಸುತ್ತಿದ್ದೀರಾ :-)
-ಪವನಜ
ಅವರೆಕಾಳು ಅನ್ನೋರು ಕೂಡ ಇಲ್ಲಿಗೆ ಆಗಾಗ್ಗೆ ಭೇಟಿ ಕೊಡ್ತಾ ಇರ್ತಾರೆ ಪವನಜರೆ
ಪ್ರತ್ಯುತ್ತರಅಳಿಸಿ:)
ಅನ್ವೇಷಿಗಳೆ,
ಪ್ರತ್ಯುತ್ತರಅಳಿಸಿಮೊದಲಿಗೆ ಅಭಿನಂದನೆಗಳು.
ಹೌದು, ಈ-ಪ್ರಪಂಚದಲ್ಲಿ ಇರುವವರಿಗೆ ನಿಮ್ಮ ಬೊಗಳೆ-ರಗಳೆ ಒಂದು stress relieving ಸಾಧನ.
ನಿಮ್ಮ ಬ್ಲಾಗಿನ ಹೆಸರು, ನಿಮ್ಮ ಹೆಸರೆ ಕುತೂಹಲಕಾರಿಯಾಗಿದೆ.
ಬ್ಲಾಗಿಸ್ತಾ ಇರಿ
ಮನಸ್ವಿನಿ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಅಭಿನಂದನೆಗೆ ಧನ್ಯವಾದ.
ನಿಮ್ಮಂಥವರು ಆಗಾಗ ಎಚ್ಚರಿಕೆಯನ್ನೂ ನೀಡುತ್ತಿರಬೇಕು ಅಂತ ಕೋರಿಕೆ.
:)
ಆತ್ಮೀಯ ಅಸತ್ಯಿಗಳೆ,
ಪ್ರತ್ಯುತ್ತರಅಳಿಸಿಶುಭಾಶಯಗಳು. ಬೊಗಳೆ ಬಿಡೋದನ್ನ ಹೀಗೆ ದಯವಿಟ್ಟು ಮುಂದುವರಿಸಿ.
ಸಂತೋಷ
Dear Mavinayanasa (Srinivas avre),
ಪ್ರತ್ಯುತ್ತರಅಳಿಸಿAap bhale aadmi hai ye ham sab jaante hai ji (Bahut taareef sun rakha hai) :)
Because I know Anveshi well, I said that... BEreyavaru oLLeyavralla antalla...
Anveshi,
ODanaaTa, I have made a mistake :)) Sorry ri!
ಸ್ವಾಮಿ ಅನ್ವೇಷಿಗಳೇ,
ಪ್ರತ್ಯುತ್ತರಅಳಿಸಿಅಭಿನಂದನೆಗಳು!
ಈ ನಿಮ್ಮ ಸೆಂಟಿ--- ಬರಹ ಭಿನ್ನವಾಗಿತ್ತು ಅದನ್ನೂ ನಿಮ್ಮ ಶೈಲಿಯಲ್ಲೇ ಅಥವಾ ಇನ್ನೂ ವಿಶೇಷವಾದ ಶೈಲಿಯಲ್ಲೇ ಬರೆಯಬಾರದಿತ್ತೇ?
ನಿಮ್ಮ ಬೊಗಳೆ ಕಾಯಕ ಹೀಗೂ ಮುಂದುವರೆಯಲಿ, ನೂರು ಸಾವಿರವಾಗಲಿ, ಸಾವಿರ ಲಕ್ಷ್ಯವಾಗಲಿ!
(ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಯಲ್ಲಿ ತಡವಾಗಿ ಅಭಿನಂದಿಸಿದ್ದಕ್ಕೆ ಕ್ಷಮೆ ಇರಲಿ!)
ಭಾಳ್ ಛೋಲೋ ಆತ್ರೀಯಪ್ಪಾ, ನಿಮ್ ಕಾಯ್ಕ ಹಿಂಗಾ ನಡುಸ್ರಿ, ನಮಿಗಂತೂ ನಿಮ್ ಬರಾ ಓದೋದು ಅಂದ್ರ ಅಗದಿ ಖುಷಿ ರೀ.
ಪ್ರತ್ಯುತ್ತರಅಳಿಸಿಹತ್ತು ಸಾವ್ರ ಮುಟ್ಟಿರೋ ನಿಮ್ ಸಂತೋಷ್‌ದೊಳಗ ನಾವೂ ಭಾಗಿಗಳ್ ರೀ.
ಅನಾನಿಮಸ್ ಸಂತೋಷರೇ...
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದ...
ಬರ್ತಾ ಇರಿ..
ಸಿಂಧು ಅವರೆ,
ಪ್ರತ್ಯುತ್ತರಅಳಿಸಿಟೈಪೋ ಎರರೇ ಬೊಗಳೆಯ ಜೀವಾಳ ಆದ್ದರಿಂದ
ಸಾರಿ ನೀವೇ ಇಟ್ಕೊಳ್ಳಿ... ಬೇಕಿದ್ರೆ ಉಟ್ಕೊಳಿ...
:)
ಅಂತರಂಗದ ಆತ್ಮೀಯ ಸತೀಶ್ ಅವರೆ,
ಪ್ರತ್ಯುತ್ತರಅಳಿಸಿನಿಮ್ಮ ಕಳಕಳಿ ಮತ್ತು ಶುಭ ಹಾರೈಕೆಗೆ ಧನ್ಯವಾದ.
ಅಕ್ಕ ಸಮ್ಮೇಳನಕ್ಕೂ ಇಲ್ಲಿಂದಲೇ ಶುಭ ಹಾರೈಕೆ.
ಕಾಳೂ ಅವರೆ,
ಪ್ರತ್ಯುತ್ತರಅಳಿಸಿನಿಮ್ ಮನ್ಸೂ ಭಾಳಾ ದೊಡ್‌ದೈತ್ರೀ...
ನಿಮ್ ಹಾರೈಕೆಗೆ ಭಾಳ ಭಾಳಾ ಧನ್ಯವಾದ
ಅಸತ್ಯಾನ್ವೇಷಿಗಳಿಗೆ ಅಭಿನಂದನೆಗಳು...
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗ್ ಚೆನ್ನಾಗಿ ಬರುತ್ತಿದೆ. ಹೀಗೆ ಮುಂದುವರೆಸಿ...
ನನಗೆ ನಿಮ್ಮ ಬ್ಲಾಗ್ ಮತ್ತು ನೀವು ಲಿಂಕ್ ಕೊಟ್ಟಿರುವ ಇತರ ಬ್ಲಾಗ್‌ಗಳನ್ನು ಓದುವುದೇ ಒಂದು ಹವ್ಯಾಸವಾಗಿಬಿಟ್ಟಿದೆ.
ಕೆಲಸದ ಮಧ್ಯೆ ಬೇಜಾರಾದಾಗ ಕಾಫಿ/ಟೀ ಕುಡಿಯಲು ಎದ್ದು ಹೋಗುವಂತೆ ನಿಮ್ಮ ಬ್ಲಾಗ್ ಕಡೆ ಕಣ್ಣಾಡಿಸುವುದು ನಿತ್ಯದ ಅಭ್ಯಾಸವಾಗಿಬಿಟ್ಟಿದೆ:)
-ಪಿ.ಕಲ್ಯಾಣ್
ಕಲ್ಯಾಣ್ ಅವರೇ,
ಪ್ರತ್ಯುತ್ತರಅಳಿಸಿನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದ.
ಏನಾದ್ರೂ ಹೇಳ್ರಪಾ :-D